ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ವಿಪ್ರ ಮಹಿಳಾ ದಿನಾಚರಣೆ 2025″ ನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತ್ತಿಯಾಗಿ ಆಗಮಿಸಿದ ಡಾ. ರಾಜೇಶ್ವರಿ ಜಿ. ಭಟ್, HOD, OBG ಡಿಪಾರ್ಟ್ಮೆಂಟ್ ಕೆಎಂಸಿ ಮಣಿಪಾಲ ಇವರು ಮಹಿಳೆಯರ PCOD ಸಮಸ್ಯೆ ಬಗ್ಗೆ ಉಪನ್ಯಾಸ ನೀಡಿದರು.
ಬಹುಮುಖ ಪ್ರತಿಭೆಯ ವಿದುಷಿ ಶ್ರೀಮತಿ ಗಾರ್ಗಿ ಎನ್ ಶಬರಾಯ ಅವರಿಗೆ “ಸಂಗೀತ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.
ಇದಕ್ಕೂ ಮೊದಲು ವಿಪ್ರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸುಧಾ ಹರಿದಾಸ್ ಭಟ್ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಹಾಗೂ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯದರ್ಶಿ ನಾಗರಾಜ್ ಭಟ್, ಕೋಶಾಧಿಕಾರಿ ಅಜಿತ್ ಬಿಜಾಪುರ್, ಮಹಿಳಾ ಪ್ರತಿನಿಧಿ ಶ್ಯಾಮಲಾ ರಾವ್ ಉಪಸ್ಥಿತರಿದ್ದರು.
ಕವಿತಾ ಲಕ್ಷ್ಮೀನಾರಾಯಣ, ವಸುಧಾ ಶ್ರೀಕೃಷ್ಣರಾಜ್, ರಾಧಿಕಾ ಚಂದ್ರಕಾಂತ್, ಜಯಶ್ರೀ ಬಾರಿತ್ತಾಯ ಸಹಕರಿಸಿದರು. ಅಂಕಿತಾ ನಿರೂಪಿಸಿ ಪೂರ್ಣಿಮಾ ಹೆಬ್ಬಾರ್ ವಂದಿಸಿದರು.












