ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ: ರಥೋತ್ಸವ ಸಂಭ್ರಮ.

ಉಡುಪಿ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಂಭ್ರಮ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮಗಳಾದ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ, ಸಿಂಹವಾಹನೋತ್ಸವ, ರಂಗಪೂಜೆ ಮತ್ತು ಪುಷ್ಪಕ ವಾಹನೋತ್ಸವ, “ಶ್ರೀ ಮನ್ಮಹಾರಥೋತ್ಸವ”, ಚೂರ್ಣೋತ್ಸವ, ಪ್ರಾತಃ ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ಹಾಗೂ ಒಕುಲಿ ಉತ್ಸವವು ಧಾರ್ಮಿಕ ವಿಧಿ-ವಿಧಾನದ ಪ್ರಕಾರ ನಡೆಯಿತು.

ವಿಜ್ರಂಭಣೆಯ ರಥೋತ್ಸವ ಮೆರವಣಿಗೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು ಹಾಗೂ ರಥೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡರು. ಶ್ರೀ ಕ್ಷೇತ್ರಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನಸಂತರ್ಮಣೆ ವ್ಯವಸ್ಥೆ ಮಾಡಲಾಯಿತು.