ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಅ.03 ರಿಂದ ಅ.12 ರ ವರೆಗೆ ಶರನ್ನವರಾತ್ರಿ ಮಹೋತ್ಸವ.

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇರುವ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಅ.03 ರಿಂದ ಅ.12 ರ ವರೆಗೆ ದೇಗುಲದ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

ಅ.03 ರಿಂದ 12 ರವರೆಗೆ ಕಾರ್ಯಕ್ರಮಗಳು:
ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಶ್ರೀಕಾಲ ಬಲಿ ಉತ್ಸವ ಮತ್ತು ಮಹೋತ್ಸವ ನಡೆಯಲಿದೆ.

ದಿನಾಂಕ: 09-10-2024 ನೇ ಬುಧವಾರ ರಾತ್ರಿ ಶಾರದಾ ದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ.

ದಿನಾಂಕ: 11-10-2024 ನೇ ಶುಕ್ರವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ,ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರಮೆರವಣಿಗೆ (ರಥಬೀದಿ ಮತ್ತು ರಾಜಬೀದಿ).
ದಿನಾಂಕ: 12-10 2024 ನೇ ಶನಿವಾರ ಉದಯಪೂರ್ವ 6-05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ ಮತ್ತು ಸಂಜೆ ವಿಜಯೋತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 7-00 ಗಂಟೆಗೆ ಮಹಾಮಂಗಳಾರತಿ ಪ್ರತಿದಿನ ಸಂಜೆ 5-30 ಗಂಟೆಯಿಂದ 7-15 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವಿರುತ್ತದೆ.

ವಿ.ಸೂ: ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇದೆ ಹಾಗೂ ಪ್ರತಿದಿನ ರಾತ್ರಿ ಉತ್ಸವದ ನಂತರ ಸಿದ್ದಾಪುರ ಹಾಗೂ ಹಳ್ಳಿಹೊಳೆ ಕಡೆ ಹೋಗುವವರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ ಮಧ್ಯಾಹ್ನ ಚಂಡಿಕಾ ಯಾಗ ಮತ್ತು ಸಂಜೆ ಶ್ರೀ ರಂಗ ಪೂಜಾ ಮತ್ತು ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಹಾಗೂ ಅನ್ನ ಸಂತರ್ಷಣೆ ಸೇವೆ ಇರುವುದು.

ಶ್ರೀ ಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2024-25ನೇ ಸಾಲಿನ ತಿರುಗಾಟವನ್ನು ಶ್ರೀ ದೇವಳದ ವತಿಯಿಂದ ನಡೆಸುತ್ತಿದ್ದು 2024-25ರ ಎಲ್ಲಾ ಆಟವೂ ಬುಕ್ಕಿಂಗ್ ಆಗಿರುತ್ತದೆ. ಆಟ ಆಡಿಸುವ ಭಕ್ತಾದಿಗಳು 2025-2026 ರ ಸಾಲಿನ ಆಟ ಒಂದರ ರೂ.5000.00ನ್ನು ಎಡ್ವಾನ್ಸ್ ಕೊಟ್ಟು ದೇವಳದ ಕಛೇರಿಯಲ್ಲಿ ತಮ್ಮ ಆಟದ ದಿನಾಂಕವನ್ನು ನಿಗದಿಪಡಿಸಿಕೊಳ್ಳಬಹುದು.

ಸರ್ವರಿಗೂ ಆದರದ ಸ್ವಾಗತ ಬಯಸುವ.

ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ
ಅನುವಂಶಿಕ ಆಡಳಿತ ಮೊಕ್ತೇಸರರು.

ಆಜ್ರಿ ಚಂದ್ರಶೇಖರ ಶೆಟ್ಟಿ ಅನುವಂಶಿಕ ಜೊತೆ ಮೊಕ್ತೇಸರರು

ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಕಮಲಶಿಲೆ ಪ್ರಕಟಣೆ ತಿಳಿಸಿದೆ.
ಮೊಬೈಲ್ :9591560809, 7022449830