ಕಟಪಾಡಿ ತ್ರಿಶಾ ಕಾಲೇಜು: ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ

ಕಟಪಾಡಿ:ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ್ 27 ಮತ್ತು 28, 2025 ರಂದು ಮೂಡಬಿದ್ರಿಯ ಆಳ್ವಾ ಸ್ ಕಾಲೇಜಿನಲ್ಲಿ ನಡೆದ Arts Xuberance 2025 –Prithvi Parva ಎಂಬ ರಾಷ್ಟ್ರ ಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದು ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿ 2025 ಅನ್ನು ಪಡೆದಿದ್ದಾರೆ.

ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಶ್ರೇಷ್ಠತೆ ತೋರಿಸಿ ಅಗ್ರಸ್ಥಾನವನ್ನು ಪಡೆದಿದ್ದಾರೆ. ನಾಟಕ (Street Play), Mock Press, ಪ್ರಬಂಧ ಮಂಡನೆ (Paper Presentation),ಇಂಗ್ಲಿಷ್ ವಾದ ವಿವಾದ (English Debate), ಶ್ಲೋಕ ಸ್ಪರ್ಧೆ(Shloka Competition), ಕವಿತಾ ಸ್ಪರ್ಧೆ(Poetry Competition), ಡಾಕ್ಯುಮೆಂಟರಿ ಚಿತ್ರ ನಿರ್ಮಾಣ (Documentary Filmmaking), ಮತ್ತು ಪೋಸ್ಟರ್ ನಿರ್ಮಾಣ (Poster Making) ವಿಭಾಗಗಳಲ್ಲಿ 1ನೇ ಸ್ಥಾನ ಹಾಗೂ, ಗಾನ ಸ್ಪರ್ಧೆ (Singing Competition) ಮತ್ತು ಕನ್ನಡ ವಾದವಿವಾದ (Kannada Debate) ನಲ್ಲಿ 2ನೇ ಸ್ಥಾನ, ನೃತ್ಯ ಸ್ಪರ್ಧೆ (Dance Competition) ಮತ್ತು ಚಿತ್ರಕಲಾ ಸ್ಪರ್ಧೆ (Painting Competition) ನಲ್ಲಿ 3ನೇ ಸ್ಥಾನವನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ, ಸಮರ್ಪಣೆ ಮತ್ತು ತಂಡ ಸ್ಪೂರ್ತಿಯನ್ನು ತೋರಿಸಿ ತಮ್ಮ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ಹಾಗೆಯೇ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.