ಕಟಪಾಡಿ: ತ್ರಿಶಾ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅನ್ನು ಕೊಡುಗೆಯಾಗಿ ನೀಡಲು ದೇಣಿಗೆ ಸಂಗ್ರಹಕ್ಕಾಗಿ ಶ್ರೀ ವಿದ್ಯಾ ವಿನಾಯಕನ ಮಹೋತ್ಸವವನ್ನು ಆರಂಭಿಸಿದ್ದು ಈ ಬಾರಿ 4ನೇ ವರ್ಷದ ಮಹೋತ್ಸವವನ್ನು ಅದ್ದೂರಿಯಿಂದ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9 ವರೆಗೆ ಆಚರಿಸಲಾಯಿತು.
ಸೆ. 7ರಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಗಣಹೋಮ, ಭಜನಾ ಕಾರ್ಯಕ್ರಮಗಳ ಮೂಲಕ ಆರಂಭಿಸಲಾಯಿತು. ಸೆ. 8 ರಂದು ಯುವ ವಾಗ್ಮಿ, ಲೇಖಕರಾದ ದೀಕ್ಷಿತ್ ನಾಯರ್ ಅವರಿಂದ ಚಿಂತನ ಮಂಥನ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನದಂದು ವಿಸರ್ಜನಾ ಸಂದರ್ಭದಲ್ಲಿ ಮಹಾಪೂಜೆಯೊಂದಿಗೆ ಅಷ್ಟಾವಧಾನ ಸೇವೆಯಾದ ಶಂಖ, ಜಾಗಟೆ, ಗಂಟೆ, ಕೊಳಲು, ಭಜನೆ, ಚಂಡೆ, ನೃತ್ಯ, ವೇದ ಪಠಣೆ ಯನ್ನು ಗಣೇಶನಿಗೆ ಸಲ್ಲಿಸಲಾಯಿತು.
ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿ ಎ ಗೋಪಾಲಕೃಷ್ಣ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಮತ್ತು ಎಸ್. ವಿ .ಎಸ್ ಕನ್ನಡ ಮಾಧ್ಯಮ ಶಾಲೆ ಕಟಪಾಡಿಯ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.