ಕಟಪಾಡಿ:ತ್ರಿಶಾ ಸಂಸ್ಥೆ: ಭಯೋತ್ಪಾದನೆ ವಿರುದ್ಧ ಹೋರಾಟ;ಎಲ್ಲರೂ ಒಂದಾಗಿ ನಿಲ್ಲಬೇಕಿದೆ

ಉಡುಪಿ:ಕಾಶ್ಮೀರದಲ್ಲಿ ನಡೆದ ಭಯಾನಕ ಉಗ್ರ ಕೃತ್ಯದ ವಿರುದ್ಧ ಕಟಪಾಡಿಯ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡುತ್ತಾ, ಭಯೋತ್ಪಾದನೆ ಮಾನವತೆಯ ವಿರುದ್ಧದ ಹೋರಾಟ. ಇದನ್ನು ಎದುರಿಸಲು ನಾವು ಎಲ್ಲರೂ ಒಂದಾಗಿ ನಿಲ್ಲಬೇಕಿದೆ. ಎಲ್ಲ ಜನರು ಒಂದಾದರೆ, ಯಾವುದೇ ರೀತಿಯ ಭಯೋತ್ಪಾದನೆಯನ್ನೂ ಎದುರಿಸಲು ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ಮಾತನಾಡುತ್ತಾ, ಈ ತಲೆಕೆಳಗಿನ ಕೃತ್ಯವನ್ನು ಹೇಡಿಗಳಷ್ಟೆ ಮಾಡಬಲ್ಲರು. ನಮಗೆಲ್ಲರೊಳಗಿನ ದೇಶಾಭಿಮಾನ ಜಾಗೃತವಾದಾಗ, ರಾಷ್ಟ್ರಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಾಗುತ್ತೇವೆ. ರಾಷ್ಟ್ರಭಕ್ತಿ ಹೆಚ್ಚಾದಾಗ, ನಮ್ಮಲ್ಲೆರ ಶಕ್ತಿಯು ಹೆಚ್ಚಾಗಿ, ಶತ್ರುಗಳನ್ನು ಎದುರಿಸಲು ಧೈರ್ಯ ಬರುತ್ತದೆ ಎಂದು ಪ್ರಭಾವಿ ಸಂದೇಶ ನೀಡಿದರು.

ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ತ್ರಿಶಾ ವಿದ್ಯಾ ಕಾಲೇಜಿನ ಪ್ರಥಮ ಬಿಕಾಂ ನ ವಿದ್ಯಾರ್ಥಿಯಾದ ನಾಗೇಂದ್ರ ಭಟ್ ಅವರು, ಅಮಾಯಕರ ಮೇಲೆ ನಡೆದ ದೌರ್ಜನ್ಯ ಅತ್ಯಂತ ಹೀನ ಕೃತ್ಯ. ಈ ರೀತಿಯ ಶಸ್ತ್ರ ರಹಿತ ಜನರ ಮೇಲೆ ನಡೆದ ದಾಳಿ ಹೇಡಿತನದ ಚಟುವಟಿಕೆ. ಇಂತಹ ಪಾಕಿಸ್ತಾನಿ ಉಗ್ರರ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಬೇಕು. ನಾವು ನಮ್ಮ ಸರ್ಕಾರದ ಜೊತೆ ಸದಾ ನಿಂತು, ಭಯೋತ್ಪಾದನೆಗೆ ತಕ್ಕ ತಿರುಗೇಟು ನೀಡಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಹಲವಾರು ನಾಗರಿಕರು ಶ್ರದ್ಧೆಯಿಂದ ಪಾಲ್ಗೊಂಡರು. ಈ ಕಾರ್ಯಕ್ರಮವು ಯುವಜನತೆಯಲ್ಲಿನ ದೇಶಭಕ್ತಿಯ ಚಿಗುರುಗಳನ್ನು ಪುಷ್ಟಿಪಡಿಸಲು ಕಾರಣವಾಯಿತು.