ಏ.16 ರಂದು ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ “ಶ್ರೀಮನ್ಮಹಾರಥೋತ್ಸವ”

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಏಪ್ರಿಲ್ 18ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಏ.16 ರಂದು “ಶ್ರೀಮನ್ಮಹಾರಥೋತ್ಸವ” ನಡೆಯಲಿದೆ.

ಕಾರ್ಯಕ್ರಮಗಳು:
ಏ.11 ರಂದು ವಿಘ್ನೇಶ್ವರ ಪ್ರಾರ್ಥನಾ ಅಂಕು ರಾರೋಪಣ, ಏ.12 ರಂದು ಧ್ವಜಾರೋಹಣ, ಸಿಂಹವಾಹನೋತ್ಸವ, ಭೇರಿತಾಡನ ಇತ್ಯಾದಿ., ಏ.13 ರಂದು ಮಯೂರ ವಾಹನೋತ್ಸವ, ಏ.14 ರಂದು ಹಂಸವಾಹನೋತ್ಸವ, ಏ.15 ರಂದು ಗಜವಾಹನೋತ್ಸವ, ಏ.16ರಂದು “ಶ್ರೀಮನ್ಮಹಾರಥೋತ್ಸವ” ಏ.17 ರಂದು ಚೂರ್ಣೋತ್ಸವ, ಅವಭೃತ, ಏ.18 ರಂದು ಸಂಪ್ರೋಕ್ಷಣೆ ನಡೆಯಲಿದೆ.

ತಮಗೆಲ್ಲರಿಗೂ ಆದರದ ಸ್ವಾಗತ

ಶ್ರೀಮತಿ ಅನುಷಾ ಎಂ.ಎಸ್. ಕಾರ್ಯನಿರ್ವಹಣಾಧಿಕಾರಿ

ಶ್ರೀ ಎನ್. ರಘುರಾಮ ಮಧ್ಯಸ್ಥ
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

ವ್ಯವಸ್ಥಾಪನ ಸಮಿತಿ ಸದಸ್ಯರು: ಪ್ರಧಾನ ಅರ್ಚಕರು, ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಶ್ರೀ ವಿಶ್ವನಾಥ್ ಶೆಟ್ಟಿ ಮಟಪಾಡಿ, ಶ್ರೀ ಅನೂಪ್ ಕುಮಾರ್ ಶೆಟ್ಟಿ, ಶ್ರೀಮತಿ ಹೇಮಾ ವಿ. ಬಾಸ್ರಿ, ಶ್ರೀ ಕೆ ತಮ್ಮಯ್ಯ ನಾಯ್ಕ್, ಶ್ರೀ ರುದ್ರ ದೇವಾಡಿಗ, ಶ್ರೀಮತಿ ಜಯಂತಿ ಮೆಂಡನ್.

ಅರ್ಚಕರು, ಉಪಾದಿವಂತರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು.