ಮಂಗಳೂರು: ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಎಡ್ವಾನ್ಸ್ಡ್ ಪರೀಕ್ಷೆಯ ಜನರಲ್ ಮೆರಿಟ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮಿಹಿರ್ ಗಿರೀಶ್ ಕಾಮತ್ ಅವರು 239 ಅಂಕ ಪಡೆದು ಜನರಲ್ ಕೆಟಗರಿ ವಿಭಾಗದಲ್ಲಿ 858ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಜನರಲ್ ಮೆರಿಟ್ ವಿಭಾಗದಲ್ಲಿ ನಿಹಾರ್ ಎಸ್.ಆರ್. 2510ನೇ ರ್ಯಾಂಕ್, ರೋಹನ್ ಹೆಬ್ಬಾಳೆ 3834ನೇ ರ್ಯಾಂಕ್ ಪಡೆದಿದ್ದಾರೆ. ಕೆಟಗರಿ ವಿಭಾಗದಲ್ಲಿ ಆರ್ಯ ಅರಿಕೆರೆ 2639ನೇ ರ್ಯಾಂಕ್, ಧೂಲಿಕಾ ರಾಣಿ ಎಸ್.ಎ. 3134ನೇ ರ್ಯಾಂಕ್, ವಿಕ್ರಮ್ ಪ್ರೇಮ್ ಕುಮಾರ್ 4627ನೇ ರ್ಯಾಂಕ್, ಜಯಪದ್ಮ ಎಸ್. ಚಿಮ್ಮನಕಟ್ಟಿ 5160ನೇ ರ್ಯಾಂಕ್, ಮೋನಿಕಾ ಕೆ. 7595ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಖರಗ್ಪುರ್, ಮುಂಬಯಿ, ಚೆನೈ, ಕಾನ್ಪುರ, ಹೊಸದಿಲ್ಲಿ, ಗೌಹಾಟಿ, ರೂರ್ಕಿ, ರೋಪರ್, ಭುವನೇಶ್ವರ, ಗಾಂಧಿನಗರ, ಹೈದರಾಬಾದ್, ಜೋದಪುರ, ಪಾಟ್ನಾ, ಇಂದೋರ್, ಮಂಡಿ, ವಾರಣಾಸಿ, ಪಾಲಕ್ಕಾಡ್, ತಿರುಪತಿ, ಧನ್ಬಾದ್, ಭಾಲೈ, ಗೋವಾ, ಜಮ್ಮು, ಧಾರವಾಡ ಐಐಟಿಗಳಲ್ಲಿ ಕಲಿಯುವ ಅವಕಾಶ ಈ ವಿದ್ಯಾರ್ಥಿಗಳಿಗೆ ದೊರೆತಿದೆ. ರ್ಯಾಂಕ್ ವಿಜೇತರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.