ಉಡುಪಿ: ಹೊಸ ಬದುಕು ಆಶ್ರಮಕ್ಕೆ ದಾನಿಗಳ ಅಗತ್ಯ ವಸ್ತುಗಳ ಕೊಡುಗೆ

ಉಡುಪಿ:ನಿರ್ಗತಿಕರ ಸೇವಾಕೈಂಕರ್ಯದಲ್ಲಿ ನಿರತವಾಗಿರುವ ಹೊಸಬದುಕು ಆಶ್ರಮಕ್ಕೆ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿದರು. ಉದ್ಯಮಿ ಮಹಮ್ಮದ್‌ ಆಸಿಫ್ ಇಕ್ಬಾಲ್ ಅವರು 100 ಊಟದ ತಟ್ಟೆ ಹಾಗೂ 100 ಲೋಟವನ್ನು ನೀಡಿದರು.

ಉದ್ಯಮಿಗಳಾದ ಮುರುಳೀಧರ ಬಲ್ಲಾಳ್ ಮತ್ತು ಗಿರಿಜಾ ಸರ್ಜಿಕಲ್ ವ್ಯವಸ್ಥಾಪಕ ರವಿ ಶೆಟ್ಟಿಯವರು ಹಾಸಿಗೆಗಳನ್ನು ನೀಡಿದರು. ಗಿರಿಯಾಸ್ ಮಳಿಗೆಯ ವ್ಯವಸ್ಥಾಪಕ ರತನ್ ಹಾಗೂ ದಾನಿಗಳು ಉಪಸ್ಥಿತರಿದ್ದರು. ಆಶ್ರಮದ ಸಂಚಾಲಕ ವಿನಯ ಚಂದ್ರ ಪ್ರಸ್ತಾವನೆಗೈದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ವಾಗತಿಸಿದರು.