ಉಡುಪಿ: ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಹಿಂದುತ್ವದ ಪರವಾಗಿ ಧ್ವನಿ ಎತ್ತುವವರ ವಿರುದ್ಧ ಜಿಲ್ಲಾ ಪೊಲೀಸರು ಕೇಸು ದಾಖಲಿಸುತ್ತಿದ್ದು, ಪೊಲೀಸರ ಈ ನಡೆಯ ವಿರುದ್ಧ ಬೃಹತ್ ಜನಾಂದೋಲನ ಪ್ರತಿಭಟನೆಗೆ ಹಿಂಜಾವೇ ಉಡುಪಿ ಜಿಲ್ಲೆ ಕರೆ ನೀಡಿದೆ.
ಇಂದು (ನ. 25) ಬೆಳಗ್ಗೆ 10 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.
ಪ್ರಮುಖ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ರೌಡಿಶೀಟರ್ ಎಂದು ಗುರುತಿಸಿ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಒಂದೆರಡು ಹೋರಾಟದ ಕೇಸುಗಳಿದ್ದರೂ ಕಾರ್ಯಕರ್ತರಿಗೆ ಕ್ರಿಮಿನಲ್ ಪಟ್ಟ ಕಟ್ಟಲಾಗುತ್ತಿದೆ.
ಕಾರ್ಕಳದಲ್ಲಿ ಕೇವಲ ಹಿಂದೂ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಇದನ್ನು ಹೀಗೆ ಬಿಟ್ಟರೆ, ಈ ಎಸ್ ಪಿ ಜಾತ್ಯಾತೀತತೆಯ ಹೆಸರಲ್ಲಿ ನಾಳೆ ಮುಸಲ್ಮಾನರನ್ನು ನಮ್ಮ ದೇವಸ್ಥಾನದ ಪೂಜೆಗೆ ಕೂರಿಸಿದರೂ ಅಚ್ಚರಿ ಇಲ್ಲ.
ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಸಿದ್ದು ಸರ್ಕಾರ ಹಿಂದೂ ಸಂಘಟನೆಗಳ ನಿರ್ಮೂಲನೆಯ ಗುತ್ತಿಗೆ ಕೊಟ್ಟಂತೆ ಕಾಣುತ್ತಿದೆ. ಈ ಅಧಿಕಾರಿಯ ಅಧಿಕಾರಾವಧಿಯಲ್ಲಿ ಜಿಲ್ಲೆಯ ತುಂಬಾ ನಮ್ಮ ಸಂಘಟನೆ ಕಾರ್ಯಕರ್ತರು ಹತ್ತಾರು ಸುಳ್ಳು ಕೇಸುಗಳಿಗೆ ತಲೆ ಕೊಟ್ಟಿದ್ದಾರೆ.
25 ನೇ ತಾರೀಕು ಉಡುಪಿಯ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಗೆ ಸಹಸ್ತ್ರ ಸಂಖ್ಯೆಯಲ್ಲಿ ಸೇರುವಂತೆ ಹಿಂದೂ ಜಾಗರಣ ವೇದಿಕೆ ಹಿಂದೂ ಸಮಾಜದ ಜನತೆಗೆ ಕರೆ ನೀಡಿದೆ.