ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಉಡುಪಿ ಕೋರ್ಟ್ ಬಳಿಯ ದೇವರಾಜ್ ಟವರ್ಸ್ ಒಂದನೇ ಮಹಡಿಯಲ್ಲಿ ಆಯೋಜಿಸಿದ ಎರಡು ದಿನಗಳ ಉಚಿತ ಶ್ರವಣ ತಪಾಸಣೆ ಶಿಬಿರಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಶಿಬಿರವು ಯಶಸ್ವಿಯಾಗಿದೆ.
ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ನ ನಿರ್ಮಲ ಪ್ರಭು ಅವರ ನೇತೃತ್ವದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ಭಾಗದ ಜನರು ಈ ಒಂದು ಉಚಿತ ಶ್ರವಣ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಇಲ್ಲಿ ಶ್ರವಣ ತಪಾಸಣೆ, ಉಚಿತ ಶ್ರವಣ ಸಾಧನ(HearingAid) ಟ್ರಯಲ್, ಶ್ರವಣ ಸಾಧನಗಳ ಮೇಲೆ ರಿಯಾಯಿತಿ, ಹಳೆ ಶ್ರವಣ ಸಾಧನಗಳನ್ನು ಹೊಸ ತಂತ್ರಜ್ಞಾನದ ಡಿಜಿಟಲ್ ಹಿಯರಿಂಗ್ ಹೆಡ್ ನೊಂದಿಗೆ ರಿಯಾಯಿತಿ ದರದಲ್ಲಿ ವಿನಿಮಯಿಸಲಾಯಿತು.