ಉಡುಪಿ: ಉಡುಪಿ ಕುಕ್ಕಿಕಟ್ಟೆ ಇಂದಿರಾ ನಗರದಲ್ಲಿ (ಬೈಲೂರು, ಕೊರಂಗ್ರಪಾಡಿ, ಅಲೆವೂರು, ಚಿಟ್ಟಾಡಿ, ಇಂದಿರಾ ನಗರ, ಮಾರ್ಪಳ್ಳಿ, ಕೆಮ್ತೂರು ಮತ್ತು ಮಂಚಿ ಗ್ರಾಮಗಳ ಬಿಲ್ಲವರ ಒಕ್ಕೂಟ) ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆಯು ಸೆ.15 ರವಿವಾರ ನಡೆಯಲಿದೆ.
ಸೆ.14 ಶನಿವಾರ ರಾತ್ರಿ ವಾಸ್ತುಪೂಜೆ, ಹೋಮ, ದಿಕ್ಪಾಲಕ ಬಲಿ ನಡೆಯಲಿದ್ದು, ಸೆ.15 ರವಿವಾರ ಬೆಳಿಗ್ಗೆ ಗಂಟೆ 8.00ರಿಂದ ಗಣಹೋಮ ಮತ್ತು “ಶ್ರೀ ಸತ್ಯನಾರಾಯಣ ಪೂಜೆ” ನಡೆಯಲಿದೆ.
ಬೆಳಿಗ್ಗೆ ಗಂಟೆ 10.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ:
ಅಧ್ಯಕ್ಷತೆಯನ್ನು ಶ್ರೀ ಗೋಪಾಲ ಪೂಜಾರಿ, ಮಂಚಿ, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.), ಇಂದಿರಾ ನಗರ ಹಾಗೂ ಉದ್ಘಾಟನೆಯನ್ನು ಶ್ರೀ ಜಗನ್ನಾಥ ಕುಂದರ್, ಬೈಲೂರು, ಕಾರ್ಯಾಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ನಿರ್ಮಾಣ ಸಮಿತಿ ಅವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳುಯಾಗಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಲೋಕಸಭಾ ಸದಸ್ಯರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ, ಶ್ರೀ ಯಶ್ಪಾಲ್ ಎ. ಸುವರ್ಣ, ಶಾಸಕರು, ಉಡುಪಿ ವಿಧಾನ ಸಭಾ ಕ್ಷೇತ್ರ, ಶ್ರೀ ಬನ್ನಂಜೆ ಬಾಬು ಅಮೀನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ತುಳು ಜಾನಪದ ವಿದ್ವಾಂಸರು, ಶ್ರೀ ಎ. ನಾರಾಯಣ ಪೂಜಾರಿ, ಉದ್ಯಮಿಗಳು, ಗುತ್ತಿಗೆದಾರರು (ಕೆ.ಎಫ್.ಐ.ಎಲ್.) ಮಾಲಕರು, ವಿ.ಎನ್. ರೋಯಲ್ ಗಾರ್ಡನ್ ಫಂಕ್ಷನ್ ಹಾಲ್, ಹೊಸಪೇಟೆ, ವಿಜಯನಗರ ಜಿಲ್ಲೆ ಹಾಗೂ ಶ್ರೀ ಸಿ.ಎ. ಕೃಷ್ಣ ಕುಮಾರ್ ಪೂಜಾರಿ, ಮೆ.ಕುಮಾರ್ ಕೃಷ್ಣ ಎಸೋಸಿಯೇಟ್ಸ್, ಬೆಂಗಳೂರು ಉಪಸ್ಥಿತರಿರುವರು.
ಗೌರವ ಉಪಸ್ಥಿತಿಯಾಗಿ ಶ್ರೀ ರಾಘು ಕೋಟ್ಯಾನ್, ಕೊರಂಗ್ರಪಾಡಿ, ಹಿರಿಯ ಸ್ಥಾಪಕ ಸದಸ್ಯರು, ಶ್ರೀ ಯತೀಶ್ ಪೂಜಾರಿ ಅಲೆವೂರು, ಅಧ್ಯಕ್ಷರು, ಅಲೆವೂರು ಗ್ರಾಮ ಪಂಚಾಯತ್, ಶ್ರೀಮತಿ ಅಮೃತ ಯು. ಪೂಜಾರಿ, ಉಪಾಧ್ಯಕ್ಷರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ವಿಜಯ ಪೂಜಾರಿ, ನಗರಸಭಾ ಸದಸ್ಯರು, ಬೈಲೂರು ವಾರ್ಡ್, ಶ್ರೀ ರಾಜು, ನಗರಸಭಾ ಸದಸ್ಯರು, ಕಸ್ತೂರ್ಬಾ ನಗರ ವಾರ್ಡ್, ಶ್ರೀ ಚಂದ್ರಶೇಖರ ಯು., ನಗರಸಭಾ ಸದಸ್ಯರು, ಇಂದಿರಾ ನಗರ ವಾರ್ಡ್ ಶ್ರೀ ಕೃಷ್ಣರಾಜ ಕೊಡಂಚ, ನಗರಸಭಾ ಸದಸ್ಯರು, ಚಿಟ್ಟಾಡಿ ವಾರ್ಡ್, ಶ್ರೀಮತಿ ಪುಷ್ಪ ಅಂಚನ್, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ಶಬರೀಶ್ ಸುವರ್ಣ, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ಸುಧಾಕರ ಪೂಜಾರಿ ಮಾರ್ಪಳ್ಳಿ, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ಮನಮೋಹನ್, ಕೊರಂಗ್ರಪಾಡಿ, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ಶಂಕರ ಪಾಲನ್, ಕೊರಂಗ್ರಪಾಡಿ, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀಮತಿ ರಂಜಿತಾ, ಕೆಮ್ತೂರು, ಸದಸ್ಯರು, ಅಲೆವೂರು ಗ್ರಾಮ ಪಂಚಾಯತ್, ಶ್ರೀ ಚಿದಾನಂದ ಕೋಟ್ಯಾನ್, ಗೌರವಾಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಶ್ರೀ ಸತೀಶ್ ಪೂಜಾರಿ ಕುಕ್ಕಿಕಟ್ಟೆ, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ನಿರ್ಮಾಣ ಸಮಿತಿ. ಶ್ರೀಮತಿ ಯಶೋದ ವಿಜಯ ಪಾಲನ್ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಮಹಿಳಾ ಘಟಕ ಹಾಗೂ ಶ್ರೀಮತಿ ರೂಪಾ ರವಿ ಕಾರ್ಯದರ್ಶಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಮಹಿಳಾ ಘಟಕ ಇವರು ಉಪಸ್ಥಿತರಿರುವರು.
ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ. ನಂತರ ಸಮಿತಿ ಸದಸ್ಯರಿಂದ ‘ಭಜನಾ ಕಾರ್ಯಕ್ರಮ’ ನಡೆಯಲಿದೆ. ಕಾರ್ಯಕ್ರಮಕ್ಕೆ ಆದರದ ಸ್ವಾಗತ ಬಯಸುವ
ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ ನಿರ್ಮಾಣ ಸಮಿತಿ.
ಗೌರವಾಧ್ಯಕ್ಷರು, ಅಧ್ಯಕ್ಷರು, ಮತ್ತು ಸರ್ವಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ.
ಅಧ್ಯಕ್ಷರು ಮತ್ತು ಸರ್ವಸದಸ್ಯರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಹಿಳಾ ಘಟಕ ಪ್ರಕಟನೆ ತಿಳಿಸಿದೆ.