ಉಡುಪಿ: ಉಡುಪಿ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಉಡುಪಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಇದರ ಸಹಕಾರದೊಂದಿಗೆ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇವರ ವತಿಯಿಂದ “ಯಕ್ಷ ಪಂಚಮಿ-2024” ಕಾರ್ಯಕ್ರಮ ಇದೇ ಸೆ.13ರಿಂದ 20ರ ವರೆಗೆ ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ಸಂಜೆ 7ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಆ ಬಳಿಕ ಬಬ್ರುವಾಹನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಸೆ. 16ರಂದು ನರಕಾಸುರ ವಧೆ, 17ಕ್ಕೆ ಅಹಲ್ಯೋದ್ಧಾರಣ, 19ಕ್ಕೆ ಕೃಷ್ಣಾರ್ಜುನ ಹಾಗೂ 20ರಂದು ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಸುಧೀರ್ ಭಟ್ ಪೆರ್ಡೂರು, ಗಣೇಶ್ ಶೆಣೈ ಶಿವಪುರ, ಸುರೇಶ್ ಮೊಲಿ, ಮುಮ್ಮೇಳದಲ್ಲಿ ನರಸಿಂಹ ಗಾಂವ್ಕರ್, ಜಯರಾಮ್ ಕೊಠಾರಿ ಕಮಲಶಿಲೆ, ಶಿಥಿಲ್ ಶೆಟ್ಟಿ ಐರಬೈಲು, ದ್ವಿತೇಶ್ ಕಾಮತ್ ಹಿರಿಯಡ್ಕ, ಮಂಜುನಾಥ್ ಶೆಟ್ಟಿ ನಾಣಿಕಟ್ಟ, ಮಾರುತಿ ನಾಕ್, ತಿಲಕ್‌ರಾಜ್ ದಿವಳ್ಳಿ, ಗಣೇಶ್ ದೇವಾಡಿಗ ಬೀಜಾಡಿ, ಅಜಿತ್ ಶೆಟ್ಟಿ ಯರುಕೋಣೆ, ಗುರು ಶಿರಾಲಿ ಮತ್ತಿತರರು ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಶೆಟ್ಟಿ, ಸದಸ್ಯ ವೆಂಕಟೇಶ್ ಪೈ ಇದ್ದರು.