ಉಡುಪಿ:ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಆದಿತ್ಯವಾರ ಎಂಜಿನಿಯರ್ ಮೀಟ್ ಜರಗಿತು. ಮುಖ್ಯ ಅತಿಥಿಯಾದ ಉಡುಪಿ ಅಂಬಾಗಿಲಿನ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಪ್ರಭಾಕರ್ ಜಿ ರವರು ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ವಾಹನಗಳ ಸ್ಟಿಕರ್ ಬಿಡುಗಡೆ ಮಾಡಿ ವಿತರಸಿದರು.
ಈ ಬಾರಿ ದ್ವಿತೀಯ ಪಿಯುಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉಡುಪಿ ನಗರಸಭೆಯ ಎಂಜಿನಿಯರ್ ರಾದ ಚೇತನ್, ಸತ್ಯ, ದಿವಾಕರ್, ಕಾರ್ತಿಕ್ ಭಾಗವಹಿಸಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಹೊಸ ಕಟ್ಟಡ ನಿರ್ಮಾಣ ಕ್ಕೆ ಕಾನೂನಿನ ಬಗ್ಗೆ ಸಲಹೆ, ನಿಯಮಾವಳಿಗಳನ್ನು ವಿವರಸಿ ಉಡುಪಿ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಸಿವಿಲ್ ಇಂಜಿನಿಯರ್ ರವರಿಗೆ ನಗರ ಸಭೆವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಕ್ಲಾಸಿಕ್ ಬಿಲ್ಡರ್ಸ್ ಎಮ್ ಡಿ ಇಂಜಿನಿಯರ್ ಪ್ರಭಾಕರ್ ಸುಮಾರು 31 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೆ “ಗ್ಲೋಬಲ್ ಅಚ್ಚುಮೆಂಟ್ಸ್ ಎವರ್ಬ್” ಪ್ರಶಸ್ತಿ ವಿಜೇತರಾದ ಇವರ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ , ಹೂ ಹಾರ , ಸ್ಮರಣಿಕೆ ನೀಡಿ , ಪ್ರಭಾಕರ್ ದಂಪತಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಬೈಲೂರು, ಭರತ್ ಭೂಷಣ ಸಂಸ್ಥೆಯ ಅಧ್ಯಕ್ಷರಾದ ಕೆ ರಂಜನ್ ಸ್ವಾಗತಿಸಿದರು. ,ಪ್ರಧಾನ ಕಾರ್ಯದರ್ಶಿ ಕೆ ಹರೀಶ್ ಪ್ರಸ್ತಾವನೆ ಗೈದರು. ಖಜಾಂಚಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವರದಿ ವಾಚಿಸಿದರು. ಚಂದ್ರಶೇಖರ್ ರಾವ್ ಕೊಡವೂರು ನಿರೂಪಣೆ ಗೈದರು.ಸಂಸ್ಥೆಯ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.ಸಂಘದ ಪಧಾದಿಕಾರಿಗಳು ನೂರಾರು ಸದಸ್ಯರು ಉಪಸ್ಥರಿದ್ದರು.












