ಉಡುಪಿ ಎ.12: ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮನಗೊಂಡು ಶುಕ್ರವಾರ ಸಂಸ್ಥೆಯ ಅಧ್ಯಕ್ಷರಾದ ಇಂಜಿನಿಯರ್.ಕೆ.ರಂಜನ್ ರವರು ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರ್ ರವರಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಾನೂನಾತ್ಮಕವಾಗಿ ಕಟ್ಟಡ ಕಟ್ಟುವಲ್ಲಿ ಮತ್ತು ಇನ್ನಿತರ ವೈಜ್ಞಾನಿಕ ರೀತಿಯ ತೊಡಕುಗಳಿಂದ ಇಂಜಿನಿಯರ್ಸ್ ಹಾಗೂ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ತೊಂದರೆಗಳನ್ನು ನಿವಾರಿಸಿ ಪ್ರಾಧಿಕಾರದಿಂದ ಉತ್ತಮ ಸೇವೆ ನೀಡುವಂತೆ ವಿನಂತಿಸಿ ಕೊಳ್ಳಲಾಯಿತು.
ಅಹವಾಲನ್ನು ಆಲಿಸಿದ ಅಧ್ಯಕ್ಷರು ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸಿ ಮುಂದಕ್ಕೆ ಉಡುಪಿಯ ಇಂಜಿನಿಯರ್ಸ್ ಮತ್ತು ನಾಗರೀಕರಿಗೆ ಕೆಲಸಗಳು ಸುಗಮವಾಗಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ತಾಕಿತ್ತು ಮಾಡಿ ಇಲಾಖೆಯ ಬೆಂಬಲ ನೀಡಲು ಶ್ರಮಿಸಿಸುದಾಗಿ ತಿಳಿಸಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.












