ಉಡುಪಿ : ರಾಜ್ಯ ಕಂದಾಯ ಇಲಾಖೆಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಐವನ್ ಡಿಸೋಜಾ ಜೂನ್ 10 ರಂದು ಅಪರಾಹ್ನ 12 ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ ಹಾಗೂ ಪಿಂಚಣಿ ಯೋಜನೆಯ ಪ್ರಗತಿ ಬಗ್ಗೆ, ಪಿಂಚಣಿದಾರರ ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಿ, ಅದಾಲತ್‍ನ್ನು ನಡೆಸಲಿರುತ್ತಾರೆ.
ಸದ್ರಿ ದಿನದಂದು ಸಾರ್ವಜನಿಕರು ಅದಾಲತ್‍ನಲ್ಲಿ ಭಾಗವಹಿಸಿ, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.