ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ; ಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಕ್ಕೆ , ಯುಗಾದಿಯ ಹಬ್ಬದ ಪರ್ವಕಾಲದಲ್ಲಿ ಸೋಮವಾರ ಪೂಜ್ಯಶ್ರೀಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ ನೀಡಿದರು.

ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ , ವೇದಘೋಷ ದೊಂದಿಗೆ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಫಲ ಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು.

ಸ್ವಾಮೀಜಿಯವರು ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ , ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು ,ದೇವಳದಲ್ಲಿ ಜರಗುವ ಶ್ರೀ ರಾಮನಾಮ ಜಪ ಕೇಂದ್ರಕ್ಕೆ ಭೇಟಿ ನೀಡಿ ಜಪ ಅಭಿಯಾನದ ಪಧಾಧಿಕಾರಿಗಳಿಗೆ ಶುಭ ಹಾರೈಸಿದರು.

ತಮ್ಮ ಅನುಗ್ರಹ ಸಂದೇಶದಲ್ಲಿ ನಮ್ಮ ಹಿರಿಯರ ಪೂರ್ವ ಜನ್ಮದ ಫಲದಿಂದಾಗಿ ಈ ದೇವಾಲಯ ನಿರ್ಮಾಣ ಗೊಂಡಿದೆ , ನಮ್ಮ ಹಿರಿಯರು ಆರಂಭಿಸಿದ ಹರಿನಾಮ ಸಂಕೀರ್ತನೆ ಗೆ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ನಡೆಸುತ್ತಿರುವುದು ಸಂತಸವಾಗಿದೆ , ನಾಮ ಸ್ಮರಣಿವೆಂಬುದು ಯಜ್ಞ ಕಾರ್ಯ ಕ್ಕೆ ಸಮನಾಗಿದೆ. ನಿರಂತರ ಭಗವಂತನಾ ಆರಾಧನೆಯಿಂದ ಮುಕ್ತಿ ಪ್ರಾಪ್ತಿ ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಸದಾ ಇರಲಿ ಎಂದು ಅನುಗ್ರಹಸಿದರು.

ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್ , ವೇದ ಮೂರ್ತಿ ಚೇಂಪಿ ರಾಮಚಂದ್ರ ಭಟ್ , ದೇವಳದ ಮುಕ್ತೇಸರ ಪಿ ವಿ ಶೆಣೈ , ದೇವಳದ ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಸಂತೋಷ್ ವಾಗ್ಲೇ , ಆಡಳಿತ ಮಂಡಳಿಯ ಸದಸ್ಯರಾದ ವಸಂತ್ ಕಿಣೆ , ಪುಂಡಲೀಕ್ ಕಾಮತ್ , ಶಾಂತಾರಾಮ್ ಪೈ , ಗಣೇಶ್ ಕಿಣಿ , ಉಮೇಶ್ ಪೈ , ಕೈಲಾಸನಾಥ ಶೆಣೈ , ನಾರಾಯಣ ಪ್ರಭು , ಅಶೋಕ ಬಾಳಿಗ , ರೋಹಿತಾಕ್ಷ ಪಡಿಯಾರ್ ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು , ಊರ ಪರಊರ ಸಾವಿರಾರು ಸಮಾಜ ಭಾಂದವರು ಉಪಸ್ಥರಿದ್ದರು.