ಉಡುಪಿ: ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ದರ್ಶನ ಕೈಗೊಂಡ ಅವರು, ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು.
![](https://udupixpress.com/wp-content/uploads/2024/12/1000056896.jpg)
ತನ್ನ ಅಜ್ಜನವರು ತಮಗೆ ಕಲಿಸಿಕೊಟ್ಟ ಭಗವದ್ಗೀತೆಯ ವಿಚಾರಗಳನ್ನು ಶ್ಲೋಕಗಳನ್ನು ಸ್ವಾಮೀಜಿಯ ಮುಂದೆ ಹೇಳಿದರು. ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
ಉಡುಪಿ ಶ್ರೀ ಕೃಷ್ಣ ಮಠದಿಂದ ಕೊಲ್ಲೂರು ಕ್ಷೇತ್ರ ಹಾಗೂ ಗೋಕರ್ಣ ಕ್ಷೇತ್ರದ ಸಂದರ್ಶನಕ್ಕೆ ತೆರಳಿದರು.