ಉಡುಪಿ: ಉಡುಪಿ ಶ್ರೀ ಪಲಿಮಾರು ಮಠದ ಯೋಗದೀಪಿಕಾ ಟ್ರಸ್ಟ್ ಇವರು, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಸಹಯೋಗದಲ್ಲಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಶ್ರೀಕೃಷ್ಣ ಟೆಕ್ನಿಕಲ್ ಎಜ್ಯುಕೇಶನ್ ಸೆಂಟರ್ ಇದರ ವಾರ್ಷಿಕೋತ್ಸವ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವು ನಡೆಯಿತು.

ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿ, ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದಾದರೂ ಶ್ರದ್ಧೆ ಮತ್ತು ಕಠೀಣ ಪರಿಶ್ರಮ ಬೇಕಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಕಲಿಯುವಂತ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗ ಅಥವಾ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಡುವುದಾದರೂ ತರಬೇತಿ ನೀಡುವುದರಿಂದ ಈ ತನಕ ವಿದ್ಯಾರ್ಜನೆ ಮಾಡಿದ ಎಲ್ಲಾ ಮಕ್ಕಳು ಉದ್ಯೋಗಸ್ಥರಾಗಿದ್ದರೆ. ವಿಜ್ಞಾನ ಯುಗದಲ್ಲಿ ಎಲೆಕ್ಟ್ರಿಕಲ್, ಇಲೊಕ್ಟಾನಿಕ್ಸ್,ಕಂಪ್ಯೂಟರ್ ಉಪಕರಣಗಳ ಬಳಕೆ ಹೆಚ್ಚಾಗಿರುವುದರಿಂದ ಇಂತಹ ವಿದ್ಯೆಗೆ ಬೇಡಿಕೆ ಇದೆ. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಪಲಿಮಾರು ಮಠದ ಮುಖ್ಯ ಬಲರಾಮ ಭಟ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಶುಭ ಸಂದೇಶ ನೀಡಿದರು. ಸಂಸ್ಥೆಯ ಪ್ರಾಶುಪಾಲರಾದ ಸುಧೀಂದ್ರ ಯು.ಬಿ ಇವರು ಪ್ರಸ್ತಾವನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ರವೀಂದ್ರ ಇವರು ಸ್ವಾಗತಿಸಿ ನಿತಿನ್ ಸೇರಿಗಾರ್ ಧನ್ಯವಾದ ನೀಡಿರು.












