ಉಡುಪಿ: ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವ ಭರವಸೆ ನೀಡಿ, ಆನ್‌ಲೈನ್‌ನಲ್ಲೇ ವ್ಯವಹಾರ ನಡೆಸಿ 86,80,000ರೂ.ಗಳನ್ನು ಅಪರಿಚಿತರೊಬ್ಬರು ವಂಚಿಸಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಪ್ಪುಂದ ಗ್ರಾಮದ ಭಾಸ್ಕರ್ (40) ಅವರು ಶೇರು ಮಾರುಕಟ್ಟೆಯ ಬಗ್ಗೆ ಆನ್‌ಲೈನ್‌ನಲ್ಲಿ ಸರ್ಚ್ ಮಾಡುತಿದ್ದಾಗ ಯಾರೋ ಅಪರಿಚಿತರು ವಾಟ್ಸ್‌ಅಪ್ ಗ್ರೂಪ್‌ಗೆ ತನ್ನನ್ನು ಸೇರಿಸಿದ್ದು, ಅವರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ವಿವಿಧ ಗ್ರೂಪ್‌ಗೆ ಸೇರಿಸಲ್ಪಟ್ಟು ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ನಂಬಿಕೆ ಹುಟ್ಟಿಸಿ ಹಣ ಹೂಡಿಕೆಗೆ ಪ್ರೇರೇಪಿಸಿದ್ದು, ಅದರಂತೆ ಅವರು ಸೂಚಿಸಿದ ವಿವಿಧ ಖಾತೆಗಳಿಗೆ 86 ಲಕ್ಷ ರೂ. ಹಣ ಡಿಪಾಸಿಟ್ ಮಾಡಿದ್ದು, ನಂಬಿಕೆ ದ್ರೋಹ ಮಾಡಿರುವುದಾಗಿ ಭಾಸ್ಕರ್ ದೂರಿನಲ್ಲಿ ತಿಳಿಸಿದ್ದಾರೆ.