ಉಡುಪಿ: ಶಾರ್ಟ್ ಸರ್ಕ್ಯೂಟ್; ಚಲಿಸುತ್ತಿದ್ದ ಆಲ್ಟೋ ಕಾರಿನಲ್ಲಿ ಬೆಂಕಿ.

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಸೆ.24ರಂದು ಉಡುಪಿಯ ಎಂಟಿಆರ್ ಹೊಟೇಲ್’ನ ಎದುರು ನಡೆದಿದೆ.

ಬ್ರಹ್ಮಗಿರಿಯ ಹಿರಿಯ ನಾಗರಿಕರೊಬ್ಬರು ತಮ್ಮ ಹಳೆಯ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಶಾರ್ಟ್‌ ಸರ್ಕ್ಯೂಟ್ ಆಗಿದೆ. ಕೂಡಲೇ ಅವರು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಕಾರಿನಿಂದ ಹೊರಗೆ ಬಂದಿದ್ದಾರೆ.

ಈ ವೇಳೆ ಕಾರಿನ ಎದುರು ಭಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.