ಉಡುಪಿ: ವೃದ್ಧೆಯ ವಾರಸುದಾರರಿಗೆ ಸೂಚನೆ

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಜಯಲಕ್ಷ್ಮೀ (72) ಎಂಬ ವೃದ್ಧೆಯನ್ನು ಸಂಬಂಧಿಕರು ಪತ್ತೆಯಾಗದ ಹಿನ್ನೆಲೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಆಶ್ರಯಕ್ಕಾಗಿ ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆ ವೃದ್ಧಾಶ್ರಮಕ್ಕೆ ದಾಖಲಿಸಿದ್ದು, ವೃದ್ಧೆಯು ಮೂಲತಃ ಕುಂದಾಪುರ ತಾಲೂಕಿನ ಸೇನಪುರ ಮೂಲದವರು ಎಂದು ತಿಳಿಸಿದ್ದು, ಇವರ ಸಂಬಂಧಿಕರು ಯಾರಾದರೂ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ: 1090 ಅಥವಾ ದೂ.ಸಂಖ್ಯೆ: 0820-2526394 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.