ಉಡುಪಿ :ಜನರ ಬಹುಕಾಲದ ಕನಸೊಂದು ನನಸಾಗುವ ಕಾಲ ಕೂಡಿ ಬಂದಿದೆ. ಈ ವಾರಾಂತ್ಯದಲ್ಲಿ ಉಡುಪಿ ನಗರದ ಮನೆಗಳಿಗೆ ವಾರಾಹಿ ನದಿಯ ನೀರು ಪೂರೈಕೆ ಆಗಲಿದೆ. ನಗರಸಭೆ ವ್ಯಾಪ್ತಿಯಲ್ಲಿ ದಿನಪೂರ್ತಿ ಕುಡಿಯುವ ನೀರು ಪೂರೈಸುವ ಈ ಯೋಜನೆಯ ಪೈಪ್ ಲೈನ್ ಸಂಪರ್ಕ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನೀರು ಪೂರೈಕೆಗೆ ಎಲ್ಲವೂ ಸಜ್ಜಾಗಿದ್ದು ಇದಕ್ಕೆ ಪೂರ್ವಭಾವಿಯಾಗಿ ಮಣಿಪಾಲದಲ್ಲಿರುವ ನಗರಸಭೆ ನೀರಿನ ರೇಚಕದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಅಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲನೆ ನಡೆಸಿದರು.
ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ 22 ಸಾವಿರ ಮನೆಗಳಿಗೆ ಈಗಾಗಲೇ ಮೀಟರ್ ಅಳವಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷ ಕೂಡ ಪೂರ್ಣಗೊಂಡಿದೆ.ವಾರಾಹಿ ಕುಡಿಯುವ ನೀರು ಯೋಜನೆಯಡಿ ನಗರಕ್ಕೆ ಮಾತ್ರವಲ್ಲದೆ ಹಲವು ಪಂಚಾಯತ್ ಗಳಿಗೂ ನೀರು ಪೂರೈಕೆ ಮಾಡಲಾಗುತ್ತದೆ.ಬಹಳ ವರ್ಷಗಳಿಂದ ಕೋಟ್ಯಂತರ ವೆಚ್ಚದ ಈ ವಾರಾಹಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕುಟುಂತ್ತಾ ಸಾಗಿತ್ತು.