ಉಡುಪಿ: ಕಾಂಗ್ರೆಸ್ ನೇತೃತ್ವದ ಸರಕಾರ ಬಂದಾಗಲೆಲ್ಲಾ ವಕ್ಪ್ ಎನ್ನುವ ಮಹಾಮಾರಿ ಎಲ್ಲೆಡೆಯೂ ವಕ್ಕರಿಸಿಕೊಳ್ಳುತ್ತಿದೆ.ವಕ್ಫ್ ದೇಶದ ಏಕತೆಯನ್ನು ನುಚ್ಚುನೂರು ಮಾಡಿದೆ.
ಬುದ್ಧಿಜೀವಿಗಳೇ ಹೂಡಿದ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು ಹೀರೆಬೆಟ್ಟ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕಾಮತ್ ರೈತಮೋರ್ಚಾ ಉಡುಪಿ ಜಿಲ್ಲೆ ಇವರು ತಿಳಿಸಿದ್ದಾರೆ.
ವಕ್ಫ್ ಎನ್ನುವ ವ್ಯವಸ್ಥೆ ಹಿಂದೂ ಸಮಾಜವನ್ನು ಕತ್ತಲೆಗೆ ದೂಡಿದೆ. ಇದು ಕಾಂಗ್ರೆಸ್ ಜನತೆಗೆ ಎಸೆದ ದ್ರೋಹವಾಗಿದೆ. ಈ ಮೋಸದ ಕಾನೂನನ್ನು ,ವಿದೇಯಕವನ್ನು ಹಿಂದೂಸಮಾಜ ಗಂಭೀರವಾಗಿ ಪರಿಗಣಿಸುವ ಮೂಲಕ ತಮ್ಮ ತಮ್ಮ ಜಮೀನು ಪಹಣಿಗಳನ್ನ ಪರಿಶೀಲಿಸಬೇಕಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.