ಉಡುಪಿ: ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿಯ ಸಂದರ್ಭದಲ್ಲಿ ಆತ್ರಾಡಿ ಮರಾಠಿ ತೋಟ ನಿವಾಸಿ ಬಡ ಕುಟುಂಬದ ದೇವೇಂದ್ರ ಕಾಮತ್ ಇವರಿಗೆ ಮನೆ ದುರಸ್ಥಿ ಬಗ್ಗೆ ಸಹಾಯಧನವನ್ನು ಜಿಲ್ಲಾ ಗವರ್ನರ್ ಎಂಜೆಎಫ್ ಲಯನ್ ಹನೀಫ್ ಅವರ ಹಸ್ತದಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಜಿಲ್ಲಾ ಗವರ್ನರ್ ಎಂಜೆಎಫ್ ಲಯನ್ ಶ್ರೀಮತಿ ಸಪ್ನಾ ಸುರೇಶ್, ಲಯನ್ಸ್ ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆ, ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿ, ಕೋಶಾಧಿಕಾರಿ ಲಯನ್ ಎ. ಬಾಲಕೃಷ್ಣ ಹೆಗ್ಡೆ, ಮತ್ತು ಹಿರಿಯಡ್ಕ ಕ್ಲಬ್ ನ ಸದಸ್ಯರಾದ ಹರೀಶ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಬೊಮ್ಮರ ಬೆಟ್ಟು,ಗಂಗಾಧರ್ ಶೆಟ್ಟಿಗಾರ್, ರವೀಂದ್ರ ನಾಥ್ ಹೆಗ್ಡೆ. ರಘುವೀರ್ ಶೆಟ್ಟಿಗಾರ್, ಸುಂದರ್ ಕಾಂಚನ್ಒಂತಿ ಬೆಟ್ಟು,ಶ್ರೀನಾಥ್ ಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಎಚ್ ಗಣೇಶ್ ಮತ್ತು ಮಾಜಿ ತಾಲೂಕು ಪಂಚಾಯತ್ ಸದಸ್ಯ ಸತ್ಯಾನಂದ ನಾಯಕ್ ಆತ್ರಾಡಿ, ಪ್ರಕಾಶ್ ಶೆಟ್ಟಿ ಪಡ್ಡಾಮ್ ಮುಂತಾದವರು ಹಾಜರಿದ್ದರು.












