ಉಡುಪಿ: ಅಂಬಲಪಾಡಿಯ ಮನೆಯಲ್ಲಿ ಬೆಂಕಿ ಅನಾಹುತ ಅವಗಢದಲ್ಲಿ ಮೃತ ಪಟ್ಟ ಲಯನ್ ರಮಾನಂದ ಶೆಟ್ಟಿ ಮತ್ತು ಲಯನ್ ಅಶ್ವಿನಿ ಆರ್ ಶೆಟ್ಟಿ ದಂಪತಿಗಳಿಗೆ ಜು 19 ರಂದು ಬಡಗಬೆಟ್ಟು ಸೊಸೈಟಿ ಯ ಜಗನ್ನಾಥ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಉಡುಪಿ ಚೇತನದ ವತಿಯಿಂದ ನುಡಿ ನಮನದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಲಯನ್ಸ್ ಮಾಜಿ ಗವರ್ನರ್ ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಓರ್ವ ಶ್ರೇಷ್ಠ ಉದ್ಯಮಿ, ಸಮಾಜ ಸೇವಕರಾದ ಲಯನ್ ರಮಾನಂದ ಶೆಟ್ಟಿ ದಂಪತಿಗಳ ನಿಧನ ಸಮಾಜಕ್ಕೆ ಆದ ದೊಡ್ಡ ನಷ್ಟ , ದಂಪತಿಗಳು ಅತೀ ಅನ್ಯೋನ್ಯತೆಯಾಗಿ ಸಮಾಜಕ್ಕೆ ಮಾದರಿಯಾಗಿ ಬದುಕಿದ್ದರು. ಅವರು ಬದುಕಿದ ರೀತಿ, ಸಮಾಜಕ್ಕೆ ನೀಡಿದ ಸೇವೆ ಸದಾ ನಮ್ಮನ್ನು ಕಾಡುತ್ತಿರುತ್ತದೆ. ಅಗಲಿದ ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲಿ, ಕುಟುಂಬಕ್ಕೆ, ಮಕ್ಕಳಿಗೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿ ನುಡಿ ನಮನವನ್ನು ಸಲ್ಲಿಸಿದರು . ಇದೇ ಸಂದರ್ಭದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಒಂದು ನಿಮಿಷದ ಪ್ರಾರ್ಥನೆ ಮೂಲಕ ಸೇರಿದ ಎಲ್ಲ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ನ ಜಿಲ್ಲಾ ಗವರ್ನರ್ ಲಯನ್ ಮೊಹಮ್ಮದ್ ಹನೀಫ್, ಪ್ರಥಮ ಜಿಲ್ಲಾ ಗವರ್ನರ್ ಲಯನ್ ಸಪ್ನ ಸುರೇಶ್, ನಿಕಟ ಪೂರ್ವ ಜಿಲ್ಲಾ ಗವರ್ನರ್ ಡಾ.ಲಯನ್ ನೇರಿ ಕರ್ನೆಲಿಯೋ, ಮಾಜಿ ಜಿಲ್ಲಾ ಗವರ್ನರ್ ವಿ ಜಿ ಶೆಟ್ಟಿ, ತುಳು ಜನಪದ ಸಾಹಿತಿ ಲಯನ್ ಡಾ.ಗಣನಾಥ ಎಕ್ಕಾರು, ಬಿಜೆಪಿ ಮುಖಂಡೆ ಶ್ರೀಮತಿ ವೀಣಾ ಶೆಟ್ಟಿ ಹಾಗೂ ಯುವ ಬಂಟರ ಸಂಘ ಕಂಬಳ ಕಟ್ಟ ಇದರ ಅಧ್ಯಕ್ಷ ಲಯನ್ ಶಿವಪ್ರಸಾದ್ ಶೆಟ್ಟಿ ಇವರುಗಳು ಅಗಲಿದ ದಂಪತಿಗಳಿಗೆ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಸಂಪುಟ ಸದಸ್ಯರು, ವಿವಿಧ ಕ್ಲಬ್ ನ ಪದಾಧಿಕಾರಿಗಳು ಭಾಗವಹಿಸಿ ಮೃತರ ಆತ್ಮಕ್ಕೆ ಶೃದ್ಧಾಂಜಲಿ ಸಲ್ಲಿಸಿದರು.
ಉಡುಪಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಪುಷ್ಪರಾಜ್ ಶೆಟ್ಟಿ, ಲಯನ್ ಅಭಿಜಿತ್ ಸುವರ್ಣ, ಕೋಶಾಧಿಕಾರಿ ಲಯನ್ ಮನೋಜ್ ಕುಮಾರ್ ಶೆಟ್ಟಿ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಲಯನ್ ಪ್ರವೀಣ್ ಕುಮಾರ್ ನಿರೂಪಿಸಿ ವಂದಿಸಿದರು.