ಉಡುಪಿ: ರಕ್ಕಸ ವೇಷದಲ್ಲಿ ಮಿಂಚಿದ ಪುಟ್ಟ ಬಾಲಕ; ಲಯಬದ್ಧ ಹೆಜ್ಜೆಗಾರಿಕೆಗೆ ಪ್ರೇಕ್ಷಕರು ಫುಲ್ ಪಿಧಾ.!

ಉಡುಪಿ: ರಕ್ಕಸ ವೇಷಗಳನ್ನು ಕಂಡರೆ ಬೆಚ್ಚಿ ಬೀಳುವ ಪ್ರಾಯದಲ್ಲಿ ಪುಟ್ಟ ಕಂದಮ್ಮ ಅಬ್ಬರದ ಬಣ್ಣದ ವೇಷದ ಮುಂದೆ ತಾನೂ ವೇಷ ಹಾಕಿ ಕುಣಿಯುತ್ತಿರುವ ಕ್ಯೂಟ್ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಕರಾವಳಿ ಭಾಗದ ಹೆಮ್ಮೆಯ ಕಲೆ ಯಕ್ಷಗಾನದ ಪ್ರಭಾವ ಈ ಪುಟ್ಟ ಮಗುವಿನ ಮೇಲೆ ಅಪಾರವಾಗಿದೆ. ಯಾವುದೇ ಸ್ಟೇಜ್ ಫಿಯರ್ ಇಲ್ಲದೆ, ಈ ಐದು ವರ್ಷದ ಕಂದಮ್ಮ ಅಬ್ಬರದ ಹೆಜ್ಜೆಗಳನ್ನು ಹಾಕಿದೆ. ಜಿತಮನ್ಯು ಎಂಬ ಹೆಸರಿನ ಪುಟ್ಟ ಬಾಲಕ ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಯಕ್ಷಗಾನದಲ್ಲಿ ತನ್ನ ಲಯಬದ್ಧವಾದ ಹೆಜ್ಜೆಗಾರಿಕೆಯಿಂದ ಪ್ರೇಕ್ಷಕನ ಮನಸೂರೆಗೊಂಡಿದೆ. ಯಕ್ಷಗಾನದಲ್ಲಿ ದಿಗಿಣ ಎಂದು ಕರೆಯಲಾಗುವ ಕುಣಿತವನ್ನು ಲೀಲಾಜಾಲವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆ ಪಡೆದಿದೆ.