ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಮನೆಗಳ ಪೈಕಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಮ್.ಎಲ್. ಸಾಮಗರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಾಗದಲ್ಲಿ 20 ಮನೆಗಳ ಗೃಹಸಮುಚ್ಚಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಶೃಂಗೇರಿ ಶಾರದಾ ಪೀಠಾಧೀಶ್ವರ ವಿಧುಶೇಖರ ಭಾರತೀ ಸ್ವಾಮಿಗಳು ಭೂಮಿ ಪೂಜೆಯನ್ನು ನೆರವೇರಿಸಿ ಫೌಂಡೇಶನ್ ಮಾಡುವ ಸತ್ಕಾರ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಬೃಹತ್ ಯೋಜನೆ ಪಟ್ಲ ಯಕ್ಷಾಶ್ರಯ ಅಡಿಯಲ್ಲಿ 100 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ 36 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ. 26 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದೆ.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಸ್ಥಳದಾನಿಗಳಾದಂತಹ ಎಂಎಲ್ ಸಾಮಗ, ಪ್ರತಿಭಾ ಸಾಮಗ, ಫೌಂಡೇಶನ್ ದಾನಿಗಳಾದಂತಹ ಕೆ ಕೆ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ದಿವಾಕರ್ ಶೆಟ್ಟಿ ಕೊಡವೂರು, ಶಶೀಂದ್ರ ಕುಮಾರ್ ಪಾವಂಜೆ, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಇಂದ್ರಾಳಿ ಜಯಕರ ಶೆಟ್ಟಿ, ಅಜಿತ್ ಶೆಟ್ಟಿ ಗುಜರಾತ್, ಪುರುಷೋತ್ತಮ ಭಂಡಾರಿ ಅದ್ಯಾರ್, ಸಿಎ ಸುದೇಶ್ ರೈ, ನಿರೂಪಮಾ ಶೆಟ್ಟಿ, ಸುಧಾಕರಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.












