ಉಡುಪಿ: ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲಿಗೆ, ಜರ್ಮನ್ ತಂತ್ರಜ್ಞಾನದ ವೇಗವಾಗಿ ಹೋಗುವ, ಹೊಸ ಎಲ್ಎಚ್ ಬಿ ಬೋಗಿಗಳನ್ನು ನೀಡಿದ್ದ ಬಗ್ಗೆ ಕರಾವಳಿ ವಲಯದಲ್ಲಿ ಭಾರಿ ಸುದ್ದಿಯಾಗಿತ್ತು. ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇಡೀ ಪ್ರಪಂಚಕ್ಕೆ ಡಂಗುರ ಸಾರಿದ ರಾಜಕೀಯ ನಾಯಕರಗಳ ನಾಯಕರುಗಳೇ ಇಲ್ನೋಡಿ ಎಂದು ಗಮನ ಸೆಳೆದಿದ್ದಾರೆ.
ಮತ್ಸ್ಯಗಂಧ ಎಕ್ಸ್ಪ್ರೆಸ್ ನ ಟಾಯ್ಲೆಟ್ ನ ಹೊರಗಿನ ಎರಡು ಬಾಗಿಲುಗಳ ಮೇಲಿನ ಪೇಂಟ್ ಸವೆದು ಹೋಗಿದೆ ಎಂದು ದೂರಿದ್ದಾರೆ. ಟಾಯ್ಲೆಟ್ ನ ನೀರಿನ ಫ್ಲೆಶ್ ಮಾಡುವ ನೋಬ್ ತುಂಡಾಗಿದೆ.
ಟಾಯ್ಲೆಟ್ ಒಳಗೆ ನೀರಿಲ್ಲ, 16 ಗಂಟೆ 35 ನಿಮಿಷದ ಈ ರೈಲು ಪ್ರಯಾಣವನ್ನು ನೀರಿಲ್ಲದೆ ಮಾಡಲು ಸಾಧ್ಯವೇ?ಆದುದರಿಂದ ಟಾಯ್ಲೆಟ್ ಗಬ್ಬುನಾಥ ಬರುತ್ತಿದೆ. ಯಾವುದೋ 8- 10 ವರ್ಷ ಹಳೆಯ ಬೋಗಿಗಳನ್ನು ಮತ್ಸ್ಯಗಂಧ ರೈಲಿಗೆ ನೀಡಿರುತ್ತಾರೆ ಹಾಗೂ ಹೊಸ ಎಲ್ಎಚ್‌ಬಿ ಬೋಗಿಗಳನ್ನು ಕದ್ದಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಕೂಡಲೇ ಮಂಗಳೂರು ಉಡುಪಿ, ಉತ್ತರ ಕನ್ನಡ, ಸಂಸದರು ಗಮನಹರಿಸಿ ಎಂದು ಆಗ್ರಹಿಸಿದ್ದಾರೆ.












