ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ರ ಕಿ.ಮೀ.124.83, ಕಿ.ಮೀ.125.93, ಕಿ.ಮೀ 130.03 ಮತ್ತು ಕಿ.ಮೀ.133.30 ಗಳಲ್ಲಿ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ, ತನಿಕೋಡ್‍ನೊಂದ ಎಸ್.ಕೆ ಬಾರ್ಡರ್‍ವರೆಗೆ (ಕಿ.ಮೀ.123.80 ರಿಂದ ಕಿ.ಮೀ.141.00 ರವರೆಗೆ) ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ, ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ರಾ.ಹೆ 169 ರ 123.80 ಕಿ.ಮೀ ತನಿಕೋಡ್ ಗೇಟ್‍ನಿಂದ 141.00 ಕಿ.ಮೀ ಎಸ್.ಕೆ ಬಾರ್ಡರ್‍ವರೆಗೆ ಅಧಿಕ ಭಾರದ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಆದೇಶಿಸಿರುತ್ತಾರೆ.
ಬದಲಿ ಮಾರ್ಗದ ವಿವರ: ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ- ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ- ಜಯಪುರ-ಬಾಳೆಹೊಳೆ-ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್
ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












