ಉಡುಪಿ, ಮೇ 24: ಕೌಶಲ್ಯಾಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯಯು ಮೇ 15 ರಿಂದ 19 ರ ವರೆಗೆ ದೆಹಲಿಯ ದ್ವಾರಕಾದಲ್ಲಿ ಆಯೋಜಿಸಿದ ರಾಷ್ಟ್ರದ ಅತೀ ದೊಡ್ಡ ಕೌಶಲ್ಯ ಸ್ಪರ್ಧೆಯಾದ ಭಾರತದ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಉಡುಪಿಯ ರೋಹನ್ ಕೋಟ್ಯಾನ್ ಅವರು ಡ್ರೋನ್ ಫಿಲ್ಮ್ ಮೇಕಿಂಗ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದು, ಸೆಪ್ಟೆಂಬರ್- 2024 ರಲ್ಲಿ ಫ್ರಾನ್ಸ್ನ ಲಿಯೋನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯ ನಿವಾಸಿಯಾದ ಶಶಿಧರ ಕೋಟ್ಯಾನ್ ಮತ್ತು ವಸುಧಾ ಕೋಟ್ಯಾನ್ ದಂಪತಿಗಳ ಮಗನಾದ ರೋಹನ್ ಕೋಟ್ಯಾನ್, ಪ್ರಸ್ತುತ ಮಣಿಪಾಲ್ ಇನ್ಸಿ÷್ಟಟ್ಯೂಟ್ ಆಫ್ ಕಮ್ಯುನಿಕೇಷನ್ ಇಲ್ಲಿ ಬಿ.ಎ ಇನ್ ಮಾಸ್ ಮೀಡಿಯಾ ಅಂಡ್ ಕಮ್ಯುನಿಕೇಷನ್ ವ್ಯಾಸಾಂಗ ಮಾಡುತ್ತಿದ್ದು, ಜಿಲ್ಲೆಗೆ ಹೆಮ್ಮೆ ತಂದ ಇವರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರದೀಪ್ ಡಿಸೋಜಾ ಶುಭಹಾರೈಸಿದ್ದಾರೆ.