ಉಡುಪಿ:ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ 10 ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಜರುಗಿತು.
ಸಂಘವು 10 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3,508 ಸದಸ್ಯರನ್ನು ಹೊಂದಿದ್ದು ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.97.36 ಸಾಲ ವಸೂಲಾತಿ ನಡೆಸಿದೆ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 40.8 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ಐದು ಸಾವಿರ ಸದಸ್ಯರನ್ನು ಹೊಂದಿ 50 ಲಕ್ಷ ಶೇರು ಬಂಡವಾಳ ಹೊಂದಿ ಕಡಿಮೆ ಬಡ್ಡಿ ದರದಲ್ಲಿ ಹಾಗೂ ತ್ವರಿತ ವಾಗಿ ಗುಂಪು ಸಾಲ,ಚಿನ್ನಾಭರಣ ಸಾಲ,ವಾಹನ ಸಾಲ ನೀಡಲಿದ್ದೇವೆ.
ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಹೊಂದಬೇಕು,ಇದಕ್ಕೆ ಸದಸ್ಯರೆಲ್ಲರೂ ತಮ್ಮನ್ನು ಸಂಪೂರ್ಣವಾಗಿ ಸಂಘದಲ್ಲಿನ ವ್ಯವಹಾರವನ್ನು ಮಾಡಬೇಕು. ಸಂಘವು ಹವಾನಿಯಂತ್ರಿತ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಸಾಲಿನಲ್ಲಿ ಸಂಘವು ಸ್ವಂತ ಕಟ್ಟಡ ಹೊಂದುವ ಯೋಜನೆ ಹಾಕಿದ್ದು, ಪ್ರಸ್ತುತ ವರ್ಷದಲ್ಲಿ ಲಾಭದಲ್ಲಿ 9% ಪಾಲು ಮುನಾಫೆಯನ್ನು ಘೋಷಿಸಿ ಮುಂದಿನ ಸಾಲಿನಲ್ಲಿ 20 ಲಕ್ಷ ಲಾಭ ಬರುವ ಗುರಿ ಇದೆ ಎಂದು ಅಧ್ಯಕ್ಷರು ತಿಳಿಸಿದರು.
ಸಹಕಾರ ಸಂಘದಲ್ಲಿನ ನಿರ್ದೇಶಕರಾದವರಿಗೆ ಯಾವುದೇ ಸ್ವಹಿತಾಸಕ್ತಿ ಇರುವುದಿಲ್ಲಾ ಆರ್ಥೀಕ ವ್ಯವಸ್ಥೆಯಲ್ಲಿ ಸಹಕಾರಿ ಬೆಳೆಸುವಲ್ಲಿ ನಿರ್ದೆಶಕರು ಹಾಗೂ ಸಿಬ್ಬಂದಿಗಳಿಗೆ ಸಹಕಾರಿ ಬೆಳೆಸುವಲ್ಲಿ ತುಂಬಾ ತಾಸದಾಯಕವಾಗಿದ್ದು ಸಮಾಜವನ್ನು ಮತ್ತು ಇತರ ಬಡವರ್ಗದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ದೃಷ್ಠಿಯಿಂದ ಈ ಸಹಕಾರಿ ಉಗಮವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಹಾಮಂಡಳ ನಿ.ಬೆಂಗಳೂರು ಇದರ ನಿರ್ದೇಶಕರಾದ ಮತ್ತು ಸಂಘದ ಕಾನೂನು ಸಲಹೆಗಾರರಾದ ಮಂಜುನಾಥ ಎಸ್.ಕೆ ಹೇಳಿದರು.
ಮಹಾಸಭೆಯಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಕುಸುಮಾ ಕಾಮತ್,ಲಕ್ಷ್ಮಣ ನಾಯ್ಕ್ ಪೆರ್ಣಾಂಕಿಲ, ಬಸವ ನಾಯ್ಕ್ ನರ‍್ಜೆಡ್ಡು ಅವರನ್ನು ಸನ್ಮಾನಿಸಲಾಯಿತು.
ಏಕಶೃಂಗಾ ಸ್ವಸಹಾಯ ಗುಂಪು ನೀರಜೆಡ್ಡು ಹೆಗ್ಗುಂಜೆ ಅತೀ ಹೆಚ್ಚು ವ್ಯವಹಾರ ಶೀಘ್ರ ರೀತಿಯಲ್ಲಿ ಆಂತರಿಕ ಸಾಲ ಹಾಗೂ ಬ್ಯಾಂಕ್ ಸಾಲ ಪಡೆದು ಸೂಕ್ತ ಮರುಪಾವತಿಯ ವ್ಯವಹಾರವನ್ನು ಗಮನಿಸಿ ಸಂಘದ ಅಧ್ಯಕ್ಷರಾದ ಹರೀಶ ನಾಯ್ಕ್ ಹಾಗೂ ಕಾರ್ಯದರ್ಶಿಯಾದ ವಿಜಯ್ ಬೈದಶ್ರೀ ಸ್ವಸಹಾಯ ಗುಂಪು ಅಂಬಲಪಾಡಿ ಅಧ್ಯಕ್ಷರಾದ ಶ್ರೀಮತಿ ನಿಶಾ ಮತ್ತು ಶಕುಂತಳಾ ಅವರನ್ನು,ಹಾಗೂ ಸಹಕಾರಿಯಲ್ಲಿ ಉತ್ತಮ ವ್ಯವಹಾರ ನಡೆಸುತ್ತಿರುವ ಸದಸ್ಯರನ್ನು ಗುರುತಿಸಲಾಯಿತು.ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೆರ್ಗಡೆ ಹೊಂದಿದ ಸಂಘದ ಸದಸ್ಯರ ಮಕ್ಕಳಾದ ಸಹನಾ ಎನ್,ಪ್ರತೀಕ್ ಎಸ್,ಯಶಸ್ವೀನಿ ನಾಯ್ಕ್,ತೇಜಸ್ವೀನಿ ಡಿ ಮೊರೆ,ಸಾನ್ವಿ,ಕೃತೀಕಾ,ಸಾಕ್ಷೀ,ಕೃಷ್ಣಪ್ರಸಾದ,ಪವನ ಕುಮಾರ,ಕನ್ನಿಕಾ,ಆದಿತ್ ಎನ್ ಪೂಜಾರಿ ಅವರಿಗೆ ಪ್ರೊತ್ಸಹ ಧನ ವಿತರಿಸಿ ಸನ್ಮಾನಿಸಲಾಯಿತು. ಸಂಘದ ಕಾನೂನು ಸಲಹೆಗಾರರಾದ ಅಶ್ವಿನ್ ಕುಮಾರ ಎ, ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ ನಾಯ್ಕ್ ನಿರ್ದೆಶಕರಾದ ಆರ್.ಸಿ.ನಾಯ್ಕ್, ಗಣೇಶ, ಸತೀಶ ನಾಯ್ಕ್, ಚಂದ್ರ ಎಚ್ ನಾಯ್ಕ್, ಕೃಷ್ಣ ನಾಯ್ಕ್, ಕರುಣಾಕರ ಕಾಂಚನ್, ಎನ್.ಸುರೇಶ ಅಮೀನ್, ರಘುನಾಥ ನಾಯ್ಕ್ ಹಾಗೂ ಅನೇಕ ಸಹಕಾರಿಯ ಸಿ.ಇ.ಓ ಗಳು ಉಪಸ್ಥಿತರಿದ್ದರು.ಕುಮಾರಿ ಅಶ್ವಿನಿ ಪ್ರಾರ್ಥನೆ ಮಾಡಿ, ಸಂಘದ ಸಿಬ್ಬಂದಿ ಕಿರಣ ಕುಮಾರ ಸ್ವಾಗತಿಸಿ, ಸಿ.ಇ.ಓ ಪ್ರಶಾಂತ್ ಶೀರೂರ್ ವಾರ್ಷಿಕ ವರದಿ ವಾಚಿಸಿ ವಂದಿಸಿದರು.












