ಶಿರ್ವ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿನ ಪಠ್ಯೇತರ ಘಟಕ, ಹವ್ಯಾಸ ಪ್ರಾಜೆಕ್ಟ್ ಘಟಕ, ಇನ್ನೋವೇಶನ್ ಘಟಕ ಮತ್ತು ಐಎಸ್ಟಿಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿ ಗಳ ಪ್ರಾಜೆಕ್ಟ್ ಪ್ರದರ್ಶನವು ಸೋಮವಾರ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಮೆಕ್ಯಾನಿಕಲ್ ವಿಭಾಗದಿಂದ 5, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಿಂದ 23, ಸಿವಿಲ್ ವಿಭಾಗದಿಂದ 4, ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 33, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಶಿನ್ ಲರ್ನಿಂಗ್ 15 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು.
ಡೀಪ್ ಲರ್ನಿಂಗ್, ಮೆಶಿನ್ ಲರ್ನಿಂಗ್, ಬ್ಲಾಕ್ಚೈನ್, ಆರೋಗ್ಯ ರಕ್ಷಣೆ, ಶಿಕ್ಷಣ ವ್ಯವಸ್ಥೆ, ವ್ಯಾಪಾರ, ಹವಾಮಾನ ಮುನ್ಸೂಚನೆ, ರಕ್ತದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಮಳೆ ಮುನ್ಸೂಚನೆ ಟ್ರಾಫಿಕ್ ಪ್ರಿಡಿಕ್ಷನ್ ಪ್ರಾಜೆಕ್ಟ್ಗಳ ಮಾದರಿಯನ್ನು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪ್ರದರ್ಶಿಸಿದರು. ಪ್ರತೀ ವಿಬಾಗದಲ್ಲಿ ಅತ್ಯುತತಿಮ ಪ್ರಾಜೆಕ್ಟಗೆ ನಗದು ಬಹುಮಾನ ನೀಡಲಾಯಿತು.
ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಮತ್ತು ವಿಭಾಗದ ಮುಖ್ಯಸ್ಥರು ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ ಸಲಹೆ ನೀಡಿದರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.