ಉಡುಪಿ: ಸುನಾಗ್ ಆರ್ಥೋಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸುನಾಗ್ ಸುಸ್ಥಿರ ಆರೋಗ್ಯದ ಅಡಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೆರಿಗೆ ಹಾಗೂ ಸ್ತ್ರಿರೋಗ ವಿಭಾಗದ ಸಹಯೋಗದಲ್ಲಿ “ಉಚಿತ ಆರೋಗ್ಯ ಶಿಬಿರ, ಸಂಧಿವಾತ ಮತ್ತು ಮೂಳೆ ಸಾಂದ್ರತೆ ಹಾಗೂ ಮಹಿಳಾ ಆರೋಗ್ಯ ತಪಾಸಣೆ ಶಿಬಿರ” ಇದೇ ಫೆ.12ರಂದು ಬೆಳಿಗ್ಗೆ 9ರಿಂದ 6ಗಂಟೆಯವರೆಗೆ ಕುಂಜಿಬೆಟ್ಟುವಿನ ಶಾರದ ಕಲ್ಯಾಣಮಂಟಪದ “ಜ್ಞಾನ ಮಂದಿರ”ದಲ್ಲಿ ನಡೆಯಲಿದೆ ಎಂದು ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನರೇಂದ್ರಕುಮಾರ್ ಎಚ್.ಎಸ್. ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿಬಿರಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೂ, ಆದ್ಯತೆಯ ಮೇರೆಗೆ ಉಚಿತವಾಗಿ ಮೂಳೆ ಸಾಂದ್ರತೆ ಪರೀಕ್ಷೆ, ಗರ್ಭಕಂಠ ತಪಾಸಣೆ, ಸ್ತನರೋಗ ತಪಾಸಣೆ, ಸಕ್ಕರೆ ಹಾಗೂ ಹಿಮೋಗ್ಲೋಬಿನ್ ರಕ್ತ ಪರೀಕ್ಷೆ ಹಾಗೂ ತಜ್ಞ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಲಾಗುವುದು ಎಂದರು.
ಉಡುಪಿಯ ಹಿರಿಯ ಸ್ತ್ರೀರೋಗ ತಜ್ಞೆ ಡಾ. ಸುಲೋಚನ ಹೊಳ್ಳ, ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ. ಹೇಮಚಂದ್ರ ಹೊಳ್ಳ, ಹಿರಿಯ ಸ್ತ್ರೀರೋಗ ತಜ್ಞೆ ಡಾ. ವಿಜಯ ವೈ.ಬಿ ಹಾಗೂ ಕೆಎಂಸಿಯ ಕ್ಯಾನ್ಸರ್ ಸ್ತ್ರೀರೋಗ ತಜ್ಞೆ ಡಾ. ಶ್ಯಾಮಲಾ ಮಾಹಿತಿ ನೀಡಲಿದ್ದಾರೆ. ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಸ್ತ್ರೀರೋಗ ತಜ್ಞೆ ಡಾ. ವಿಜಯ ವೈ.ಬಿ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೀಣಾ ನರೇಂದ್ರ ಎಚ್., ಮ್ಯಾನೇಜರ್ ಶೋಭಾ ಇದ್ದರು.












