ಉಡುಪಿ ಪವರ್ ಸಂಸ್ಥೆಯ ನೂತನ ಕಚೇರಿಯ (R) ಉದ್ಘಾಟನಾ ಸಮಾರಂಭ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ಪವರ್(R) ಇವರ ನೂತನ ಸ್ವಂತ ಕಚೇರಿಯ ಉದ್ಘಾಟನಾ ಸಮಾರಂಭವು ದಿನಾಂಕ 19/10/2024 ರಂದು ಸಾಯಂಕಾಲ 5:30 ರ ಸಮಯಕ್ಕೆ ಸರಿಯಾಗಿ ನಡೆದಿರುತ್ತದೆ.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಯವರಾದ ಡಾ.ಕೆ.ವಿದ್ಯಾಕುಮಾರಿ ಯವರು ಗೌರವ ಅತಿಥಿಗಳಾಗಿ ಡಾ. ಎಪಿ ಆಚಾರ್ಯ CEO, AIC NITTE INCUBATION CENTRE ಮತ್ತು ಮೆಂಟರ್ ಆಫ್ ಪವರ್ ಇವರುಗಳು ಭಾಗವಹಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ತನುಜಾ ಮಾಬರ್ ವಹಿಸಿದ್ದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಯವರು ತಮ್ಮ ಭಾಷಣದಲ್ಲಿ ಮಹಿಳಾ ಉದ್ಯಮಶೀಲ ಪವರ್ ಸದಸ್ಯರ ಕಾರ್ಯವೈಖರಿಯನ್ನು ಪ್ರಶಂಶಿಸುತ್ತಾ ಪವರ್ ತಂಡದ ಒಗ್ಗಟ್ಟು ಸಂಘಟನಾ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂಸ್ಥೆಯ ಸ್ವಂತ ಕಚೇರಿಯನ್ನು ಉದ್ಘಾಟಿಸಲು ಒಬ್ಬ ಮಹಿಳೆಯಾಗಿ ನನಗೂ ಕೂಡ ಹೆಮ್ಮೆ ಸಂತೋಷ ಎರಡು ಆಗುತ್ತಿದೆ ಎಂದರು.

ಈ ಸ್ವಂತ ಕಚೇರಿಯ ಸದಸ್ಯೆಯರಿಗೆ ಸ್ವಂತ ಮನೆಯ ಭಾವನೆಯನ್ನು ಕೊಡುವುದಲ್ಲದೇ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಎಂದರು. ಆದಷ್ಟು ಬೇಗ ಈ ಸಂಸ್ಥೆಯು ಸಾವಿರ ಸದಸ್ಯತ್ವ ಸಂಖ್ಯೆಯನ್ನು ಹೊಂದುವಂತಾಗಲಿ ಎಂದು ಆಶಿಸಿದರು. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯುವ ಮೂಲಕ ಸಂಸ್ಥೆಯನ್ನು ಬೆಳೆಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಅನುಕೂಲ ಮಾಡಿಕೊಡುವ ಮೂಲಕ ಈ ಪವರ್ ಸಂಸ್ಥೆಯು ಉನ್ನತ ಎತ್ತರಕ್ಕೆ ಏರಲಿ ಬೆಳೆಯಲಿ ಎಂದು ಹಾರೈಸಿದರು.

ಸಮಾರಂಭದ ಸ್ವಾಗತ ಭಾಷಣವನ್ನು ಪವರ್ ಸಂಸ್ಥೆಯ ಈಗಿನ ಅಧ್ಯಕ್ಷೆ ಯವರಾದ ಶ್ರೀಮತಿ ತನುಜಾಮಾ ಮಾಬೆನ್ ರವರು ಮಾಡಿದರು. ರೇಷ್ಮಾ ತೋಟ ಇವರು ಧನ್ಯವಾದಗಳನ್ನು ಅರ್ಪಿಸಿದರು ಈ ಕಾರ್ಯಕ್ರಮವನ್ನು ಡಾ. ಪೂಜನ ಕಾಮತ್ ರವರು ನಿರೂಪಿಸಿದರು.

ಸಮಾರಂಭದಲ್ಲಿ ಸ್ಥಾಪಕ ಸದಸ್ಯೆಯರುಗಳಾದ ಮಾಜಿ ಅಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಯ ಶೆಟ್ಟಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.