ಉಡುಪಿ: ಪಂಚ ಗ್ಯಾರಂಟಿ ಯೋಜನೆಗಳ ಜನಜಾಗೃತಿ ವಾಹನ ಜಾಥಾ ಆಗಮನ.

ಉಡುಪಿ: ಕರ್ನಾಟಕ ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ರಾಜ್ಯದ ದೀನ ದಲಿತರ‌‌ ಹಾಗೂ ಜನಸಾಮಾನ್ಯರ ಜೀವನವನ್ನು ಬೆಳಗಿಸುತ್ತ ಬಂದಿದೆ.

Oplus_131072

ಈ ಯೋಜನಗಳು ಇನ್ನಷ್ಟು ಸಮರ್ಪಕವಾಗಿ ಜನಸಾಮಾನ್ಯರನ್ನು ತಲುಪಿಸಬೇಕೆಂಬ ಸರ್ಕಾರದ ಆಶಯವಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳ ಸವಲತ್ತಿನ ಬಗ್ಗೆ ಜನಜಾಗೃತಿ ವಾಹನ ಜಾಥಾವು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜನಜಾಗೃತಿ ವಾಹನ ಜಾಥಾವು ಆಗಮಿಸಿದ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು ಹಸಿರು ಧ್ವಜ ಬೀಸುವ ಮೂಲಕ ಪಂಚ ಗ್ಯಾರಂಟಿ ಯೋಜನೆಗಳ ಜನಜಾಗೃತಿ ವಾಹನ ಜಾಥಾಕ್ಕೆ ಚಾಲನೆ ನೀಡಿ ಈ ವಾಹನ ಜಾಥಾದಿಂದ ಜನಸಾಮಾನ್ಯರು ಇನ್ನಷ್ಟು ಉಪಯೋಗವನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.