ಉಡುಪಿ, ನ.9: ನಿವೃತ್ತ ಪೊಲೀಸ್ ಉಪನಿರೀಕ್ಷಕ ವಿಜಯ ಅಮೀನ್ ಬ್ರಹ್ಮಾವರ (61) ಅಲ್ಪಕಾಲದ ಅಸೌಖ್ಯದಿಂದ ನ.8 ರಂದು ನಿಧನರಾದರು.
ಇವರು ಮಣಿಪಾಲ, ಶಂಕರನಾರಾಯಣ, ಕೊಲ್ಲೂರು, ಉಡುಪಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರಿಗೆ ನಿವೃತ್ತ ಪೊಲೀಸ್ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘವು ಸಂತಾಪ ವ್ಯಕ್ತಪಡಿಸಿದೆ.