ಉಡುಪಿ: ತುಳುನಾಡ ಟೈಗರ್ಸ್ ನ‌ 4ನೇ ವರ್ಷದ ‘ಹುಲಿ ಕುಣಿತ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್, ಉಡುಪಿ ಇವರ ವತಿಯಿಂದ ರಾಜೇಶ್ ಸುವರ್ಣ ನೇತೃತ್ವದಲ್ಲಿ ಇದೇ ಆ.26 ಮತ್ತು 27ರಂದು ನಿಟ್ಟೂರು ಹೈಸ್ಕೂಲ್ ಬಳಿ ಆಯೋಜಿಸಲಾಗಿರುವ 4ನೇ ವರ್ಷದ ‘ಹುಲಿ ಕುಣಿತ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.
ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು.

ತುಳುನಾಡ ಟೈಗರ್ಸ್ ತಂಡದ ಪ್ರಮುಖರಾದ ರಾಜೇಶ್ ಸುವರ್ಣ, ಮದನ್ ಮಣಿಪಾಲ್, ರಂಗಣ್ಣ, ದಿವಾಕರ ಪೂಜಾರಿ, ಸುಕೇಶ್ ಪೂಜಾರಿ, ಸುದರ್ಶನ್, ಪವನ್, ಅಶೋಕ್ ಕೋಟ್ಯಾನ್, ಶಶಾಂಕ್ ಕುಂದರ್, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.