ಉಡುಪಿ: 14ನೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾದ ಎಚ್. ಶಾಂತರಾಜ ಐತಾಳ್ ಅವರನ್ನು ಸ್ವಗೃಹದಲ್ಲಿ ಡಿಸೆಂಬರ್ 22 ಶುಕ್ರವಾರದಂದು ವೀಳ್ಯ ನೀಡುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಡಿಸೆಂಬರ್ 30ರಂದು ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಸಲಾಗುವುದು ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್. ಪಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಗಿಣಿ ಎಸ್ ಐತಾಳ್, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಮಾಜಿ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ ಶಂಕರ್, ಜಿಲ್ಲಾ ಕ ಸಾ ಪ ಪದಾಧಿಕಾರಿಗಳಾದ ಮನೋಹರ್ ವಿ., ಭುವನ ಪ್ರಸಾದ್ ಹೆಗ್ಡೆ, ನಾರಾಯಣ ಮಡಿ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ನರಸಿಂಹಮೂರ್ತಿ, ತಾಲೂಕು ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ವಿದ್ಯಾ ಪ್ರಸಾದ್, ಮುರಳಿಧರ ಆಚಾರ್ಯ, ಶ್ರೀನಿವಾಸ್ ಉಪಾಧ್ಯ ಎಚ್. ಶಾಂತರಾಜ ಐತಾಳ್ ಅವರ ಮನೆಯ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಗೌರವ ಕಾರ್ಯದರ್ಶಿ ಜನಾರ್ಧನ್ ಕೊಡವೂರು ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಧನ್ಯವಾದ ನೀಡಿದರು.