ಉಡುಪಿ: ರಾಜ್ಯ ಕಾಂಗ್ರೆಸ್ ನಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಂಭಮೇಳಕ್ಕೆ ಹೋಗಿ ಬಂದ ನಂತರ ಮತ್ತು ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಚಟುವಟಿಕೆಗಳು ಬಿರುಸುಗೊಂಡಿವೆ.
ಇದೇ ವೇಳೆ ಬಿಜೆಪಿ ಮುಖಂಡರು ಕೂಡ ಡಿಕೆಶಿ ನಡೆಯನ್ನು ಕೊಂಡಾಡುತ್ತಿರುವುದು ಹೊಸ ಬೆಳವಣಿಗೆ. ಉಡುಪಿ ಶಾಸಕ ಯತ್ಪಾಲ್ ಸುವರ್ಣ ಅವರು ಕೂಡ ಇವತ್ತು ಮಾಧ್ಯಮದ ಜೊತೆ ಮಾತನಾಡಿ ಡಿಕೆಶಿ ಅವರ ನಡೆಯನ್ನು ಹಾಡಿ ಹೊಗಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಡಿಕೆಶಿ ಅವರು ಸತ್ಯವನ್ನು ಹೇಳಿದ್ದಾರೆ. ಒಬ್ಬ ಹಿಂದೂ ಆಗಿ ಹುಟ್ಟಿ ಅವರು ಕುಂಭಮೇಳಕ್ಕೆ ಹೋಗಿದ್ದು ಇತರೆ ಕಾಂಗ್ರೆಸಿಗರಿಗಿಂತ ಒಳ್ಳೆಯ ನಡೆ. ಡಿಕೆಶಿ ಅವರ ಈ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಇತಿಹಾಸದಲ್ಲೇ ಈ ರೀತಿ ಸತ್ಯವನ್ನು ಮಾತನಾಡಿದರು ಡಿಕೆಶಿ ಮಾತ್ರ. ಕಾಂಗ್ರೆಸಿಗರ ಓಲೈಕೆ ರಾಜಕಾರಣದ ಮಧ್ಯೆ ಡಿಕೆಶಿ ಅವರ ಈ ನಿಲುವು ಸ್ವಾಗತಾರ್ಹ ಎಂದು ಹೇಳಿದ್ದಾರೆ.












