ಉಡುಪಿ ಜಿಲ್ಲೆಯ ಗೃಹ ರಕ್ಷಕ ದಳ‌ದ ಗೌರವ ಸಮಾದೇಷ್ಟರಾಗಿ ಡಾ.ರೋಶನ್ ಶೆಟ್ಟಿ ನೇಮಕ

ಉಡುಪಿ: ತೆಂಕನಿಡಿಯೂರು ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ‌ ನಿರ್ದೇಶಕ ಡಾ.ರೋಶನ್ ಶೆಟ್ಟಿ ಅವರನ್ನು ಜಿಲ್ಲೆಯ ಗೃಹ ರಕ್ಷಕ ದಳ‌ ಗೌರವ ಸಮಾದೇಷ್ಟರನ್ನಾಗಿ ರಾಜ್ಯ ಸರಕಾರ‌ ನೇಮಿಸಿದೆ.

ಇವರು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.