ಉಡುಪಿ: ನಮ್ಮ ಜನ್ಮ ಭೂಮಿ ಭಾರತ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಉಡುಪಿ ಜಿಲ್ಲಾಯುವ ಬ್ರಾಹ್ಮಣ ಪರಿಷತ್ತಿನಿಂದ ಬ್ರಾಹ್ಮಿ ಸಭಾಭವನದಲ್ಲಿ ಆ.15 ರಂದು ಮುಂಜಾನೆ ಅದ್ದೂರಿಯಿಂದ ನಡೆಯಿತು.
ಸುಮಾರು 20 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ ತಾಯಿನಾಡಿಗಾಗಿ ಹೋರಾಡಿದ ಯೋಧ ಶ್ರೀಪತಿ ಭಟ್ ರವರು ಧ್ವಜಾರೋಹಣವನ್ನು ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. ಪಾಕಿಸ್ತಾನದ ಗಡಿ ಭಾಗದಲ್ಲಿ, ಹಿಮ ಪರ್ವತದ , ನೆರೆ ಪೀಡಿತ, ಪಾಕೃತಿಕ ವಿಕೋಪಗಳಿಗೆ ತುತ್ತಾದ ಪ್ರದೇಶಗಳಲ್ಲಿ ಬುಲ್ಡೋಜರ್ ಇತ್ಯಾದಿ ಯಂತ್ರಗಳನ್ನು ನಡೆಸುತ್ತಾ ಯೋಧರಿಗೆ ನಡೆದಾಡಲು ಬೇಕಾಗುವ ಮಾರ್ಗಗಳನ್ನು ಕಲ್ಪಿಸುವ ತಾತ್ಕಾಲಿಕ ಸೇತುವೆಗಳನ್ನು ಕಟ್ಟುವ ಇತ್ಯಾದಿ ಸೇವೆಗಳನ್ನು ಮಾಡಿ, ನವ ಯುವ ಸೇನೆಗೆ ತರಬೇತಿಯನ್ನು ನೀಡುತ್ತ, ದೇಶದ ದೇಶವಾಸಿಗಳ ರಕ್ಷಣಾ ಕಾರ್ಯದಲ್ಲಿ ಸತತವಾಗಿ ದುಡಿದ ರೋಚಕ ಅನುಭವಗಳನ್ನು ಪರಿಷತ್ತಿನ ಸದಸ್ಯರೊಂದಿಗೆ ಹಂಚಿಕೊಂಡರು.
ಸಮಾರಂಭದ ಅತಿಥಿ ಅಭ್ಯಾಗತರನ್ನು ಅಧ್ಯಕ್ಷ ಚಂದ್ರಕಾಂತ್ ಕೆ ಎನ್ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಮಾಜಿ ಕಾರ್ಯದರ್ಶಿ ಹಾಗೂ ಎನ್ ಸಿ ಸಿ ಆಫೀಸರ್ ವಿವೇಕಾನಂದ ಪಾಂಗಣ್ಣಾಯ ಧ್ವಜ ವಂದನೆಯ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿಮಾಜಿ ಅಧ್ಯಕ್ಷರು ಗಳಾದ ಚೈತನ್ಯ ಎಂಜಿ , ಶಶಿಧರ ಭಟ್, ರಂಜನ್ ಕಲ್ಕೂರ್, ಎಂ.ಎಸ್.ವಿಷ್ಣು, ನಾಗರಾಜ ತಂತ್ರಿ ಮತ್ತು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.