ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್( ರಿ) ಉಡುಪಿ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಭಕ್ತಿ ಗೀತೆ ಸ್ಪರ್ಧೆಯನ್ನು ದಿನಾಂಕ ಮೇ.12 ಭಾನುವಾರ ಬ್ರಾಹ್ಮಿ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಸ್ಪರ್ಧೆಯು ನಾಲ್ಕು ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳು ಕ್ರಮವಾಗಿ 5000/-, 3000/- ಮತ್ತು 2000/- ರೂ.ಗಳ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಈ ಭಕ್ತಿಗೀತೆಸ್ಪರ್ಧೆಯು 5 ವರ್ಷದಿಂದ 10 ವರ್ಷದವರೆಗೆ, 10 ವರ್ಷ ಮೇಲ್ಪಟ್ಟು 15 , 15 ವರ್ಷ ಮೇಲ್ಪಟ್ಟು 18 ಮತ್ತು 18 ವರ್ಷ ಮೇಲ್ಪಟ್ಟ ತ್ರಿಮತಸ್ತ ವಿಪ್ರ ಬಾಂಧವರಿಗಾಗಿ ನಡೆಯಲಿದ್ದು ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಲಯಗಳ ಮೂಲಕ ನಾಲ್ಕು ವಿಭಾಗಗಳಿಗೂ ಪ್ರತಿನಿಧಿಸಬೇಕಾಗಿ ಕೋರಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ
5-5 -2024ರ ಒಳಗಾಗಿ ಶ್ರೀಮತಿ ಸುಮನ (9606760634) ಅಥವಾ ಶ್ರೀಮತಿ ದಿವ್ಯ ಪಾಡಿಗಾರು (9448639910) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.
ಸ್ಪರ್ಧಿಗಳು ಆ ದಿನ ಬೆಳಿಗ್ಗೆ ಆಧಾರ್ ಕಾರ್ಡ್ ಜೊತೆಗೆ ಒಂಬತ್ತು ಗಂಟೆಯ ಒಳಗೆ ಬಂದು ಸಹಕರಿಸಬೇಕಾಗಿ ವಿನಂತಿ. ಭಕ್ತಿ ಗೀತೆಗೆ ಶ್ರುತಿ ಪೆಟ್ಟಿಗೆಯನ್ನಷ್ಟೇ ಬಳಸಬಹುದು.
ಜಿಲ್ಲಾ ಮಟ್ಟದ ಈ ಭಕ್ತಿ ಸಂಗೀತ ಸ್ಪರ್ಧೆಗೆ ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಲಯಗಳು, ಒಕ್ಕೂಟಗಳು ಅಗತ್ಯವಾಗಿ ಭಾಗವಹಿಸಬೇಕಾಗಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಕಾಂತ್ ಕೆ.ಎನ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಚಂದ್ರಕಾಂತ್ ಕೆ.ಎನ್. (9449331244), ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ (9844549824)ಅಥವಾ ಶ್ರೀ ಕುಮಾರಸ್ವಾಮಿ ಉಡುಪ (9449059442)ಇವರನ್ನು ಕೂಡಾ ಸಂಪರ್ಕಿಸಬಹುದು.