ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ (ರಿ ) ಇದರ ತಿಂಗಳ ಸಾಮಾನ್ಯ ಸಭೆಯು ಎ.17 ರಂದು ಸಂಜೆ ಬ್ರಹ್ಮಾವರದ ಸಿಟಿ ಸೆಂಟರ್ ನ ಸಿಂಧೂರ ಹವಾ ನಿಯಂತ್ರಿತ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ವಿಶ್ವನಾಥ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘದ ಸದಸ್ಯರಾದ ರಾಜ್ ಮೋಹನ್ ನಾಯಿರಿ ಅವರಿಂದ ಪ್ರಾರ್ಥನೆ ನೆರವೇರಿತು. ಪ್ರಧಾನ ಕಾರ್ಯದರ್ಶಿಗಳಾದ ಸತ್ಯಪ್ರಸಾದ್ ಶೆಣೈ ಅತಿಥಿಗಳನ್ನು ಸ್ವಾಗತಿಸಿದರು. ನಾಲ್ಕು ಜನ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡಿಸಲಾಯಿತು. ಮತ್ತು ಅವರ ಹೆಸರುಗಳನ್ನು ಅನುಮೋದಿಸಲಾಯಿತು.
ಸಂಘದ ಕೋಶಾಧಿಕಾರಿಗಳಾದ ಶಶಿಕಾಂತ್ ಜಿ ನಾಯಕ್ ರವರು ತಿಂಗಳ ಆಯವ್ಯಯವನ್ನು ಮಂಡಿಸಿದರು.
ಅತಿಥಿಗಳಾದ ಅಂತೂವನ್ ರಾಜ್(ಚೆಫ್) ಇವರು ಸಿರಿಧಾನ್ಯಗಳಿಂದ ಉತ್ಪನ್ನವಾಗುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಡಾlಪ್ರಕಾಶ್ ತೋಳಾರ್ ಮನೋವೈದ್ಯರು ಇವರು ಆಹಾರೋದ್ಯಮಿಗಳಿಗೆ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಇದರ ಅಧ್ಯಕ್ಷರಾದ ಲಯನ್ ಸಂತೋಷ್ ಶೆಟ್ಟಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಶಿಸಿದರು.
ಸಹಕಾರ ಸಂಘದ ಬೆಳವಣಿಗೆಯನ್ನು ಅಧ್ಯಕ್ಷರಾದ ಶ್ರೀಧರ್ ಪಿ ಎಸ್ ರವರು ವಿವರಿಸಿದರು. ನಾಲ್ಕು ಜನ ಸಭೆಯ ಪ್ರಾಯೋಜಕರಾದ 1)ಸಂತೋಷ್ ಪೂಜಾರಿ ಸವಿರುಚಿ ಹೋಂ ಪ್ರಾಡಕ್ಟ್ ಸಾಸ್ತಾನ 2) ರಾಕಿ ರಾಡ್ರಿಗಸ್ ರೈನಾ ಫುಡ್ ಪ್ರಾಡಕ್ಟ್ ಸಾಸ್ತಾನ,3) ಚಂದ್ರಶೇಖರ್ ಗಂಗಾ ಫುಡ್ ಪ್ರಾಡಕ್ಟ್ ಬೀಜಾಡಿ,4) ಹರೀಶ್ ಕೆಎಲ್ ವೈಶಾಲಿ ಎಸ್ಸೆನ್ಸೆಸ್ ಮಾರ್ಟ್ ಕೊರವಾಡಿ ಕುಂಭಾಶಿ ಇವರನ್ನು ಅತಿಥಿಗಳಿಂದ ಅಭಿನಂದಿಸಲಾಯಿತು. ಮೂರು ಜನ ಅತಿಥಿಗಳನ್ನು ಗೌರವಿಸಲಾಯಿತು.
ಸುಮಾರು 60ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಯಾ ಕರ್ಕೇರ ಕಾರ್ಯಕ್ರಮವನ್ನು ನಿರೂಪಿಸಿದರು. ನವೀನ್ ಶೆಟ್ಟಿ ಎಲ್ಲರಿಗೂ ಧನ್ಯವಾದಗಳು ಹೇಳಿದರು. ಭೋಜನ ಕೂಟದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.