ಉಡುಪಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಗೆ ಶುಭಹಾರೈಸಿದ ಪುತ್ತಿಗೆ ಶ್ರೀ

ಉಡುಪಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ವಾಸ ಮುಗಿಸಿ ಭೂಮಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಭೂಮಿಗೆ ಇಳಿಯುತ್ತಿರುವ ಸುನೀತಾ ವಿಲಿಯಮ್ಸ್ ಗೆ ಉಡುಪಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ನಮ್ಮ ಅಭಿಮಾನಿಯೂ ಆಗಿರುವ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿದ್ದಾರೆ. ಇದು ಅತ್ಯಂತ ಖುಷಿ ಕೊಟ್ಟಿದೆ. ಅವರ ಈ ಯಾತ್ರೆ ನಿರ್ವಿಘ್ನವಾಗಿ ನಡೆಯಲಿ. ಅವರ ಸಾಧನೆ ಚಿರಸ್ಥಾಯಿಯಾಗಬೇಕು. ಅವರಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಉಡುಪಿ ಮಠ ಸೇರಿದಂತೆ ವಿಶ್ವಾದ್ಯಂತ ಇರುವ ಪುತ್ತಿಗೆ ಮಠಗಳಲ್ಲಿ ಈ ಕುರಿತು ವಿಶೇಷ ಪೂಜೆ ನಡೆಸುವುದಾಗಿ ತಿಳಿಸಿದ್ದಾರೆ. ಅಮೆರಿಕಾದ ಹ್ಯೂಸ್ಟನ್ ನ ನಾಸಾ ಕಚೇರಿ ಬಳಿಯೇ ಪುತ್ತಿಗೆ ಮಠ ಕಾರ್ಯಾಚರಿಸುತ್ತಿರುವುದರಿಂದ, ನಾಸಾದ ವಿಜ್ಞಾನಿಗಳ ಜೊತೆ ಮಠ ನಿಕಟ ಸಂಪರ್ಕ ಹೊಂದಿದೆ.