ಉಡುಪಿ: ಗಗನಕ್ಕೇರಿದ ತೆಂಗಿನಕಾಯಿ ದರ; ಗ್ರಾಹಕರು ಕಂಗಾಲು

ಉಡುಪಿ: ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿವೆ. ನವರಾತ್ರಿಯ ಹೊಸ್ತಿಲಲ್ಲಿ ತೆಂಗಿನ ದರ ಗಗನಕ್ಕೇರಿದೆ. ಪ್ರತಿ ಕೆಜಿ ತೆಂಗಿನಕಾಯಿಗೆ 50 ರೂಪಾಯಿ ನೀಡಬೇಕಾಗಿದೆ. ಪ್ರತಿಕೂಲ ಹವಾಮಾನ ಹಾಗೂ ರೋಗ ಬಾಧೆಗಳಿಂದ ತೆಂಗಿನ ಇಳುವರಿಗೆ ಹಿನ್ನಡೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ತೆಂಗಿನ ದರ ಮತ್ತಷ್ಟು ಏರುವ ಸಾಧ್ಯತೆಗಳಿವೆ.

Oplus_0

ತೆಂಗಿನಕಾಯಿಗೆ ಕೆಜಿಗೆ 50 ರೂಪಾಯಿ ತಲುಪಿದ್ದು ಕರಾವಳಿಯಲ್ಲಿ ಇದೇ ಮೊದಲು. ಈವರೆಗೆ ಅತಿಹೆಚ್ಚೆಂದರೆ 42 ರೂಪಾಯಿ ದರ ಇತ್ತು. ಹಿಂದೆಂದೂ ಕಂಡಿರದ ದರ ಏರಿಕೆ ಗ್ರಾಹಕನ್ನು ಕಂಗಾಲು ಮಾಡಿದೆ.ಪ್ರತಿಕೂಲ ಹವಾಮಾನದಿಂದ ತೆಂಗಿನ ದರ ಏರಿಕೆ ಕಂಡಿದ್ದು ಅತಿಯಾದ ಮಳೆಯಿಂದ ತೆಂಗಿಗೆ ನುಸಿ ರೋಗ ಬಾಧಿಸಿದ್ದು ಇನ್ನೊಂದು ಕಾರಣ. ಅದೂ ಅಲ್ಲದೆ ಈ ಬಾರಿಯ ಬಿರು ಬಿಸಿಲಿಗೆ ಎಳನೀರು ಹೆಚ್ಚು ಬಿಕರಿಯಾಗಿತ್ತು.

Oplus_0

ಎಳನೀರು ಹೆಚ್ಚು ತೆಗೆದಿರುವುದರಿಂದ ತೆಂಗಿನ ಕಾಯಿ ಇಳುವರಿ ಕುಂಠಿತಗೊಂಡಿದೆ ಅಂತಾರೆ ಬೆಳೆಗಾರರು. ಇನ್ನು ಕೋರೋನಾ ನಂತರ ತೆಂಗಿನ ಎಣ್ಣೆಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು ತೆಂಗು ಖರೀದಿಸುವ ಗ್ರಾಹಕರಿಗೆ ಬರೆ ಎಳೆದಂತಾಗಿದೆ. ಕೊಬ್ಬರಿಯ ಬೆಲೆ 160 ರೂಪಾಯಿಗೆ ಏರಿದೆ. ಇವೆಲ್ಲ ಕಾರಣಗಳಿಂದಾಗಿ ಹಬ್ಬದ ಹೊಸ್ತಿಲಲ್ಲಿ ಮಧ್ಯಮ ವರ್ಗ ಮತ್ತು ಬಡಜನರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.