ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಕೋಟ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಉದ್ಭವ ವಾಗುತ್ತಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು, ಜಾತಿ ಲೆಕ್ಕಾಚಾರ, ಪಕ್ಷದಲ್ಲಿನ ಹಿರಿತನ ಎಲ್ಲವೂ ಗಣನೆಗೆ ತೆಗೆದುಕೊಂಡು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.
ಈ ನಡುವೆ ಸಾರ್ವಜನಿಕ ವಲಯದಲ್ಲಿ ಸದಾ ಸಮಾಜ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುವ ಬಿಲ್ಲವ ಸಮುದಾಯದ ಶ್ರೀಮತಿ ಗೀತಾಂಜಲಿ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಇವರು ರಾಜಕೀಯವಾಗಿ 2 ಬಾರಿ ಪಡುಬಿದ್ರಿ ಮತ್ತು ಕುರ್ಕಾಲುವಿನ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆ ಅದವರು. ಜನರ ಕಷ್ಟ ಸುಖದಲ್ಲಿ ಬೆರೆತವರು. ಸಮಾಜ ಸೇವೆಗೆ ದಿನದ 24 ಗಂಟೆಯು ಸ್ಪಂದಿಸುವ ಗೀತಾಂಜಲಿ ಸುವರ್ಣ ಅವರಿಗೆ ಈ ಬಾರಿಯ ವಿಧಾನ ಪರಿಷತ್ ಸದಸ್ಯರಾಗಿ ಅವಕಾಶ ನೀಡಿದರೆ ಉಭಯ ಜಿಲ್ಲೆಗಳಿಗೆ ಮತ್ತು ಮಹಿಳೆಗೂ ಪ್ರಸಾಶ್ಯ ನೀಡಿದಂತಾಗುತ್ತದೆ. ರಾಜಕೀಯದಲ್ಲಿಯು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ವಹಿಸಿರುವ ಇವರು ಪಕ್ಷಕ್ಕೆ ಯಾವುದೇ ಚುತಿ ಬಾರದ ರೀತಿಯಲ್ಲಿ ನಡೆದು ಬಂದವರು, ಹಿರಿಯರು ನಾಯಕರು ಪಕ್ಷದ ವರಿಷ್ಟರ ಗಮನಕ್ಕೆ ತರಬೇಕೆಂದು ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ.