ಉಡುಪಿ: ಕುಕ್ಕಿಕಟ್ಟೆಯಲ್ಲಿ ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟಿನೆ

ಉಡುಪಿ: ನಾರಾಯಣ ಗುರುಗಳ ಹೆಸರಿನಲ್ಲಿ ನೂತನ ಸಭಾಭವನ ನಿರ್ಮಿಸಿರುವುದು ಉತ್ತಮ ನಡೆಯಾಗಿದೆ. ಯುತ ಸಂಘಟನೆ, ಸಭಾಭವನ ನಿರ್ಮಾಣದಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಂದಿರಾನಗರ- ಕುಕ್ಕಿಕಟ್ಟೆ ವತಿಯಿಂದ ಕುಕ್ಕಿಕಟ್ಟೆಯಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾರಾಯಣ ಗುರುಗಳ ಕೊಡುಗೆ ಬಹಳಷ್ಟಿದೆ. ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿ ಹಾಗೂ ವೈಯಕ್ತಿಕವಾಗಿ 3 ಲ.ರೂ. ನೀಡುವುದಾಗಿ ಭರವಸೆ ನೀಡಿದರು.

ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥಲ ಕಜುಂದರ್ ಬೈಲೂರು ಸಭಾಭವನ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಇಂದಿರಾನಗರದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಮಂಚಿ ಸ್ವಾಗತಿಸಿದರು. ಪ್ರಜಾಪಿತ ಈಶ್ವರಿ ವಿ.ವಿ. ಸಂಚಾಲಕಿ ಸುಮಾ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಸಭಾಭವನ ನಿರ್ಮಾಣಕ್ಕೆ ಸಹಕಾರವಿತ್ತ ಜಗನ್ನಾಥ ಕುಂದರ್ ಬೈಲೂರು, ಗಣೇಶ್ ಬೈಲೂರು, ಭಾರತೀ ಗುರುವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸತೀಶ್ ಪೂಜಾರಿ, ಸುಧಾಕರ ಬೈಲೂರು ಅವರನ್ನು ವೈಯಕ್ತಿಕವಾಗಿ ಗೌರವಿಸಲಾಯಿತು. ಹಾಗೂ ಸಭಾಭವನ ಪೂರ್ಣತೆಗೆ ಧನ ಸಹಾಯ ಯಾಚಿಸಿ ಸಮಿತಿ ವತಿಯಿಂದ ಸಂಸದರಿಗೆ ಮನವಿ ಸಲ್ಲಿಸಲಾಯಿತು.

ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ,ಸಿ.ಎ. ಕೃಷ್ಣಕುಮಾರ್ ಪೂಜಾರಿ, ಸ್ಥಾಪಕ ಸದಸ್ಯ ರಾಘು ಕೋಟ್ಯಾನ್ ಕೊರಂಗ್ರಪಾಡಿ, ಉದ್ಯಮಿ ಎ. ನಾರಾಯಣ ಪೂಜಾರಿ, ಅಲೆವೂರು ಗ್ರಾಪಂ ಅಧ್ಯಕ್ಷ ಯತೀಶ್ ಪೂಜಾರಿ ಅಲೆವೂರು, ಉಪಾಧ್ಯಕ್ಷೆ ಅಮ್ರತಾ ಯು.ಪೂಜಾರಿ, ನಗರಸಭೆ ಸದಸ್ಯರಾದ ವಿಜಯ ಪೂಜಾರಿ, ರಾಜು, ಕೃಷ್ಣರಾಜ ಕೊಡಂಚ, ಅಲೆವೂರು ಗ್ರಾ.ಪಂ. ಸದಸ್ಯರಾದ ಶಬರೀಶ್ ಸುವರ್ಣ,ಮನಮೋಹನ್ ಕೊರಂಗ್ರಪಾಡಿ, ರಂಜಿತಾ ಕೆಮ್ತೂರು, ಸೇವಾ ಸಮಿತಿ ಗೌರವಾಧ್ಯಕ್ಷ ಚಿದಾನಂದ ಕೋಟ್ಯಾನ್, ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಕುಕ್ಕಿಕಟ್ಟೆ ಮಹಿಳಾ ಘಟಕದ ಅಧ್ಯಕ್ಷೆ ಯಶೋದಾ ವಿಜಯ ಪಾಲನ್, ಕಾರ್ಯದರ್ಶಿ ರೂಪಾ ರವಿ, ಅರ್ಚಕ ಸುಂದರ ಪೂಜಾರಿ, ರಮೇಶ್, ಚಿತ್ರಾಪು, ಕಲ್ಮಾಡಿ ಶೇಖರ ಪೂಜಾರಿ, ವಾಸುದೇವ ಅಮೀನ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಧಾಕರ ಬೈಲೂರು ಪ್ರಸ್ತಾವನೆಗೈದರು. ಅಶೋಕ್ ಕೋಟ್ಯನ್, ಸತೀಶ್ ಪೂಜಾರಿ ನಿರೂಪಿಸಿದರು. ಕಾರ್ಯದರ್ಶಿ ಸುಧಾಕರ ಪೂಜಾರಿ ವಂದಿಸಿದರು.