ಉಡುಪಿ ಕಿರು ಸಾಲ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ: ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರಕಾರವು ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ಮತ್ತು ವ್ಯಾಪಾರ ಪುನರ್‌ಸ್ಥಾಪಿಸುವ ಸಲುವಾಗಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ” ಕಿರು ಸಾಲ
ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಉಡುಪಿ ನಗರಸಭಾ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಪ್ರತಿ ಬೀದಿಬದಿ ವ್ಯಾಪಾರಿಯು ಪ್ರಥಮ ಹಂತದಲ್ಲಿ ರೂ. 10,000, 2ನೇ ಹಂತದಲ್ಲಿ ರೂ. 20,000 ಮತ್ತು 3ನೇ ಹಂತದಲ್ಲಿ ರೂ. 50,000 ರ ವರೆಗಿನ ಸಾಲ ಸೌಲಭ್ಯಗಳನ್ನು ಮೇಲಾಧರ ಮುಕ್ತ ಬಂಡವಾಳ ಸಾಲ ಶೇ. 7ರ ಬಡ್ಡಿಯಲ್ಲಿ ಪಡೆಯಲು
ಅರ್ಹರಾಗಿರುತ್ತಾರೆ. ಒಂದು ವರ್ಷದ ಅವಧಿಯವರೆಗೆ ಪ್ರತೀ ಕಂತನ್ನು ಪ್ರತೀ ಮಾಹೆಯಾನ ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳು ಈ ಯೋಜನೆಯಡಿ ಸಾಲ ನೀಡಲಿವೆ.

ಅಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್
ವಹಿವಾಟು ಕೈಗೊಳ್ಳಲು ಮಾಸಿಕ ಕ್ಯಾಶ್ ಬ್ಯಾಕ್ ಪಡೆಯಲು ಈ ಯೋಜನೆ ಉತ್ತೇಜಿಸಲಿದೆ.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಮತ್ತು ಸಣ್ಣಪುಟ್ಟ ಎಲ್ಲಾ ವ್ಯಾಪಾರಿಗಳು ಈ ಕುರಿತು ನಗರಸಭಾ ಕಛೇರಿಯ ಸಮುದಾಯ ಸಂಘಟನಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ/ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448723833,
9901481729 ಅನ್ನು ಸಂಪರ್ಕಿಸುವAತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.