ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆಯಿಂದ ಉಡುಪಿಯ ಕಾಲೇಜಿಗೆಂದು ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ನಾಪತ್ತೆಯಾದ ವಿದ್ಯಾರ್ಥಿನಿ ಮೂಡುಬೆಳ್ಳೆಯ ವಿವೇಕ್ ಪೈ ಅವರ ಪುತ್ರಿ ದಿಶಾ ಪೈ (19). ಉಡುಪಿಯ ಕಾಲೇಜಿನಲ್ಲಿ ಬಿಬಿಎ 2ನೇ ವರ್ಷದಲ್ಲಿ ಕಲಿಯುತ್ತಿದ್ದ ಈಕೆ ಸೆ. 23ರಂದು ಬೆಳಗ್ಗೆ ಮನೆಯಿಂದ ಕಾಲೇಜಿಗೆಂದು ಹೊರಟು ಹೋಗಿದ್ದು, ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಆಕೆಯ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಅವಳ ಬಗ್ಗೆ ಸಹಪಾಠಿಗಳಲ್ಲಿ ವಿಚಾರಿಸಿದಾಗ ಆಕೆ ಸೋಮವಾರ ಕಾಲೇಜಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.